January 15, 2025

Newsnap Kannada

The World at your finger tips!

nadda

ನಾಯಕತ್ವ ಬದಲಾವಣೆ ಇಲ್ಲ : ಮಾಸಾತ್ಯಂಕ್ಕೆ ಸಂಪುಟ ವಿಸ್ತರಣೆ : ನಡ್ಡಾ ಪ್ರಕಟ

Spread the love

ಯಾವುದೇ ಕಾರಣಕ್ಕೂ ನಾಯಕತ್ವದ ಬದಲಾವಣೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭರವಸೆ ನೀಡಿ ಈ ಮಾಸಾತ್ಯಂಕ್ಕೆ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು

ಖಾಸಗಿ ಹೋಟೆಲ್‍ನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ನಡ್ಡಾ ಸಿಎಂ ಮಧ್ಯೆ ಸುಮಾರು 35 ನಿಮಿಷಗಳ ಕಾಲ ಮಹತ್ವದ ಚರ್ಚೆ ನಡೆದಿದೆ.

ಈ ವೇಳೆ ಮಾತನಾಡಿದ ನಡ್ಡಾ ಅವರು, ಕಳಂಕರಹಿತ, ಜನಪರ ಆಡಳಿತ ಕೊಡಿ. ನಾಯಕತ್ವದ ಬದಲಾವಣೆ ಬಗ್ಗೆ ಚಿಂತಿಸದಿರಿ. ಮುಂದಿನ ಚುನಾವಣೆಯಲ್ಲಿ ಪಕ್ಷ ನಿಚ್ಚಳ ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೆ ಬರುವುದರ ಬಗ್ಗೆ ನಿಮ್ಮ ಲಕ್ಷ್ಯ ಆಗಿರಲಿ ಎಂದು ಸಲಹೆ ನೀಡಿದ್ದಾರೆ

ದೆಹಲಿಗೆ ಹೋದ ಬಳಿಕ ಸಂಪುಟ ಪುನಾರಚನೆಗೆ ಮುಹೂರ್ತ ತಿಳಿಸುತ್ತೇನೆ. ಈ ಬಾರಿ ಎಲೆಕ್ಷನ್ ಕ್ಯಾಬಿನೆಟ್ ರಚನೆ ಆಗುತ್ತದೆ. ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಹೈಕಮಾಂಡ್ ಒಲವು ತೋರಿದೆ ಬಹುತೇಕ ಈ ತಿಂಗಳ ಅಂತ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದು ಎಂದು ಸುಳಿವು ನೀಡಿದ್ದಾರೆ.

ನಾಯಕತ್ವ ವಿರುದ್ಧ ಮಾತಾಡುವವರಿಗೆ ಎಚ್ಚರಿಕೆ ನೀಡಿದ ಅವರು, ನಾಯಕತ್ವದ ವಿರುದ್ಧ ಗುಸುಗುಸು ಮಾತನಾಡುವವರ ಬಗ್ಗೆ ಮಾ ಹಿತಿ ಕೊಡಿ. ಅಂತಹವರನ್ನು ಈಗಲೇ ಮಟ್ಟ ಹಾಕಬೇಕು. ಚುನಾವಣಾ ವರ್ಷದಲ್ಲಿ ಈ ಬೆಳವಣಿಗೆ ಸರಿಯಲ್ಲ ಸೂಚಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!