October 18, 2024

Newsnap Kannada

The World at your finger tips!

YADIYURAPPA1

ಅಕ್ರಮ ಬೇಡ – ಲೈಸೆನ್ಸ್ ಪಡೆದು ಗಣಿಗಾರಿಕೆ ಮಾಡಿ : ಸಿಎಂ ಯಡಿಯೂರಪ್ಪ

Spread the love

ಅಕ್ರಮ ಗಣಿಗಾರಿಕೆಗೆ ಅವಕಾಶ ಇಲ್ಲ. ಲೈಸೆನ್ಸ್ ಪಡೆಯದೆ ಇದ್ದರೆ ಗಣಿಗಾರಿಕೆಗೆ ಅವಕಾಶವೇ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ನಡೆದ ಹುಣಸೋಡು ದುರಂತ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅವರು, ಶಿವಮೊಗ್ಗಕ್ಕೆ ಭೇಟಿ ನೀಡುತ್ತೇನೆ. ಎಲ್ಲವನ್ನು ತಿಳಿದುಕೊಂಡು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇನೆ ಎಂದರು.

ಈ ಅವಘಡಕ್ಕೆ ಕಾರಣವೇನು ಮತ್ತು ಯಾರು ಅವರಿಗೆ ಅನುಮತಿ ಕೊಟ್ಟರು ಎಂಬುದನ್ನು ಪರಿಶೀಲನೆ ಮಾಡುತ್ತೇವೆ. ಸಮಗ್ರವಾದ ತನಿಖೆ ಮಾಡಿ ಅಕ್ರಮ ಗಣಿಗಾರಿಕೆಯನ್ನು ತಡೆಯುತ್ತೇವೆ ಎಂದರು.

ಈ ಪ್ರಕರಣ ಕುರಿತಾಗಿ ಸಂಬಂಧ ಪಟ್ಟವರ ಮೇಲೆ ಕ್ರಮವನ್ನು ಕೈಗೊಳ್ಳುತ್ತೇವೆ. ನೀವು ಎಲ್ಲಿ ಗಣಿಗಾರಿಕೆ ಪ್ರಾರಂಭಿಸುತ್ತಿರಿ, ಲೈಸೆನ್ಸ್ ಪಡೆದು ಮಾಡಿ ಎಂದು ಹೇಳಿದ್ದಾರೆ.
ಜಿಲ್ಲೆಯ ಇತರ ಭಾಗಗಳಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಎಂದರು.

ಉಲ್ಟಾ ಹೊಡೆದ ಸಿಎಂ :

ಅಕ್ರಮ ಗಣಿಗಾರಿಕೆ ತಡೆಯಲು ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ 6 ಕಡೆಗಳಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿದ್ದೇವೆ. ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲಿ ಸೂಕ್ತ ಕ್ರಮ ಕೈಗೊಂಡು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ನಿನ್ನೆಯಷ್ಟೇ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಇಂದು ಮಾತನಾಡಿದ ಸಿಎಂ, ಅಕ್ರಮ ಇದ್ದರೆ ಸಕ್ರಮ ಮಾಡಿಕೊಳ್ಳಿ. ಲೈಸೆನ್ಸ್ ಪಡೆದು ಗಣಿಗಾರಿಕೆ ಮಾಡಿ ಅಕ್ರಮವಾದ ಗಣಿಗಾರಿಕೆಯನ್ನು ತಡೆಯುತ್ತೇವೆ ಎಂದು ಹೇಳುವ ಮೂಲಕ ಉಲ್ಟಾ ಹೊಡೆದರು.

Copyright © All rights reserved Newsnap | Newsever by AF themes.
error: Content is protected !!