January 16, 2025

Newsnap Kannada

The World at your finger tips!

helmtta

ದಂಡ ವಸೂಲಿ ಇಲ್ಲ : ಹೆಲ್ಮೆಟ್​​ ನೀಡಿ ಜಾಗೃತಿ ಮೂಡಿಸುತ್ತಿರುವ ಮಂಡ್ಯ ಪೊಲೀಸ್

Spread the love

ಮಂಡ್ಯ ಜಿಲ್ಲೆಯಲ್ಲಿ ಪೊಲೀಸರು ಹೆಲ್ಮೆಟ್​ ಧರಿಸದಿರುವವರಿಗೆ ದಂಡ ವಿಧಿಸುವ ಬದಲು ಸವಾರರಿಗೆ ಹೆಲ್ಮೆಟ್​ ನೀಡುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ರಸ್ತೆ, ಎಸ್.ಡಿ. ಜಯರಾಂ ವೃತ್ತ, ಮಹಾವೀರ ವೃತ್ತ, ಜೆಸಿ ವೃತ್ತ, ನಾಲ್ವಡಿ ಕೃಷ್ಣರಾಜ ಒಡೆಯರ್​ ವೃತ್ತ, ಅಂಬೇಡ್ಕರ್​ ವೃತ್ತ, ಡಾ. ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಪೊಲೀಸರು ತಪಾಸಣೆಗೆ ನಿಂತಿದ್ದಾರೆ.

ಈ ವೃತ್ತಗಳ ಮೂಲಕ ಹಾದು ಹೋಗುವ ದ್ವಿಚಕ್ರ ವಾಹನ ಸವಾರರು ಯಾರು ಹೆಲ್ಮೆಟ್​ ಹಾಕಿಲ್ಲವೋ ಅಂತಹವರನ್ನು ತಡೆದು ದಂಡ ಕಟ್ಟುವ ಬದಲು ಹೆಲ್ಮೆಟ್​ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಿ ಸ್ಥಳದಲ್ಲೇ ಹೆಲ್ಮೆಟ್​ ನೀಡುತ್ತಿದ್ದಾರೆ.

ಈ ಹಿಂದೆ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದಲ್ಲಿ ವಾಹನ ಸವಾರರಿಗೆ ದಂಡ ಬೀಳುತ್ತಿತ್ತು. ಆದರೆ ಇದೀಗ ದಂಡದ ಬದಲು ಸ್ಥಳದಲ್ಲೇ ಹೆಲ್ಮೆಟ್​​ ಖರೀದಿಸಿ ಅದನ್ನ ಧರಿಸಿಕೊಂಡು ವಾಹನ ಚಾಲನೆ ಮಾಡುವಂತೆ ಮಾಡುತ್ತಿದ್ದಾರೆ.

ಹೆಲ್ಮೆಟ್ ಮನೆಯಲ್ಲಿದ್ದರೆ 500 ರು ದಂಡ !

ಹೆಲ್ಮೆಟ್​ ಮನೆಯಲ್ಲಿದೆ ಎಂದು ಹೇಳಿ ತೆಗೆದುಕೊಳ್ಳದವರಿಗೆ 500 ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಹೆಲ್ಮೆಟ್ ಇಲ್ಲದವರಿಗೆ ಹೆಲ್ಮೆಟ್​ ನೀಡುತ್ತಿದ್ದಾರೆ, ಅಲ್ಲದೆ ಮಾಸ್ಕ್​​ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಘಟನೆಯಲ್ಲಿ ಯುವಕ ಮೃತಪಟ್ಟು ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ್ದರು. ಇದರಿಂದ ಎಚ್ಚೆತ್ತ ಮಂಡ್ಯ ಪೊಲೀಸರು ದಂಡದ ಬದಲು ಸ್ಥಳದಲ್ಲೇ ಹೆಲ್ಮೆಟ್​ ಕೊಡಿಸಿ ಎಚ್ಚರಿಕೆ ನೀಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!