December 19, 2024

Newsnap Kannada

The World at your finger tips!

dog 777

ದಾವಣಗೆರೆಯಲ್ಲಿ ಡಯಾನ ನಾಯಿಗೆ ‘777 ಚಾರ್ಲಿ’ ಸಿನಿಮಾ ನೋಡಲು ನೋ ಎಂಟ್ರಿ ಎಂದ ಸಿಬ್ಬಂದಿ

Spread the love

ಅಭಿಮಾನಿಯೊಬ್ಬ ತಾನು ಸಾಕಿದ ನಾಯಿ ಜತೆ ‘777 ಚಾರ್ಲಿ’ ಸಿನಿಮಾ ವೀಕ್ಷಿಸಲು ಹೋದಾಗ ಚಿತ್ರಮಂದಿರದವರು ನಾಯಿಗೆ ನೋ ಎಂಟ್ರಿ ಎಂದಿರುವ ಘಟನೆ ದಾವಣಗೆರೆ ತಾಲೂಕು ಪುಟಗನಾಳು ಗ್ರಾಮದಲ್ಲಿ ನಡೆದಿದೆ.

ಕೆಂಚಪ್ಪ, ತಮ್ಮೊಂದಿಗೆ ರಾಟ್​ವ್ಹೀಲರ್ ತಳಿಯ ಡಯಾನಾ ಹೆಸರಿನ ಶ್ವಾನದ ಜತೆ ಚಿತ್ರ ನೋಡಲು ಗೀತಾಂಜಲಿ ಚಿತ್ರಮಂದಿರಕ್ಕೆ ಹೋಗಿದ್ದರು. ತಮ್ಮಿಂದ ಯಾರಿಗೂ ತೊಂದರೆಯಾಗದಿರಲಿ ಎಂದು ಗಾಂಧಿ ಕ್ಲಾಸ್​ನಲ್ಲಿ ಮೂರು ಟಿಕೆಟ್ ಪಡೆದಿದ್ದರು.

ಆದರೆ, ಬೆಳಗಿನ ಪ್ರದರ್ಶನಕ್ಕೆ ಹೋಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ, ಡಿಸಿ ಸೂಚನೆ ಇದೆ, ನಾಯಿಗೆ ಚಿತ್ರಮಂದಿರದೊಳಗೆ ಪ್ರವೇಶವಿಲ್ಲ ಎಂದು ತಡೆದರು.

‘777 ಚಾರ್ಲಿ’ ಸಿನಿಮಾ ಕೂಡ ಶ್ವಾನದ್ದೇ. ನಾಯಿ ಸಿನಿಮಾ ನೋಡಬಾರದೆ? ಎಂದು ಕೆಂಚಪ್ಪ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಾಯಿಗಾಗಿಯೇ ಒಂದು ಹೆಚ್ಚುವರಿ ಟಿಕೆಟ್ ಪಡೆದರೂ ಯಾಕೆ ಪ್ರವೇಶ ನೀಡುತ್ತಿಲ್ಲ ಎಂದು ಆಕ್ಷೇಪಿಸಿ ಪ್ರತಿಭಟಿಸಿದರು.

ಇದನ್ನು ಓದಿ –ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಬೇಕು ಎಂಬ ಮನವಿ : ಹಲವು ಭಾಷೆಗಳಲ್ಲಿ ಪ್ರಧಾನಿ ಟ್ವಿಟ್

ಅವರ ಸೋದರ ಸಿದ್ದೇಶ್, ಗ್ರಾಮದ ಯುವತಿ ಹಂಸ ಕೂಡ ಸಾಥ್ ನೀಡಿದರು. ಒಂದು ವರ್ಷದ ಡಯಾನಾ ಈಗ ಗರ್ಭವತಿ. ಅವಳಿಗೂ ಮನೆಯಲ್ಲಿ ಕೂತು ಬೋರ್ ಆಗಿದೆ. ಭಾನುವಾರ ಕೆಲಸಕ್ಕೆ ರಜೆ ಇದೆ. ನಾಯಿ ಜತೆಗೆ ಸಿನಿಮಾಕ್ಕೆ ಬಂದಿದ್ದೆ. ಸಿಬ್ಬಂದಿ ಒಳಗೆ ಬಿಡದಿದ್ದರಿಂದ ಬೇಸರವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!