January 7, 2025

Newsnap Kannada

The World at your finger tips!

person

ಉಸಿರಾಟದ ತೊಂದರೆ ನರಳಾಡಿದ ಪೋಲಿಸ್ ಪೇದೆಗೆ ಬೆಡ್ ಇಲ್ಲ – ಮಾವನ ಸಂಕಟ ಕಂಡು ಅಳಲು ತೋಡಿಕೊಂಡ ಅಳಿಯ

Spread the love

ಕೊರೋನಾ ವಾರಿಯರ್ಸ್ ಎಂದು ಕರೆಯಲಾಗುವ ಪೊಲೀಸ್​ ಪೇದೆಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ ನಂತರ ಉಸಿರಾಟದಲ್ಲಿ ತೀವ್ರ ತೊಂದರೆಯಾಯಿತು. ನಂತರ ಬೆಡ್​ ಸಿಗದೆ ನರಳಾಟ ಮಾಡಿದ ಘಟನೆ ಬೆಂಗಳೂರಿನಲ್ಲಿ ಜರುಗಿದೆ

ತನ್ನ ಮಾವನನ್ನ ಉಳಿಸಿಕೊಡಿ ಎಂದು ಅಳಿಯ ಅಳಲು ನೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಈ ಪೊಲೀಸ್​ ಪೇದೆ
ಕಮರ್ಷಿಯಲ್​ ಸ್ಟ್ರೀಟ್​, ಹೆಚ್​ಎಎಲ್​ ನಲ್ಲಿ ಕೆಲಸ ಮಾಡಿದ್ದರು.

ಪೊಲೀಸ್​ ಪೇದೆಗೆ ಕಳೆದ 2 ದಿನಗಳಿಂದ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಆಸ್ಪತ್ರೆಗೆ ದಾಖಲಾಗಲು ಹಲವು ಆಸ್ಪತ್ರೆಗಳಿಗೆ ಸುತ್ತಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಸದ್ಯ ಅವರಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿರುವ ಕಾರಣ ಅವರ ಅಳಿಯ ಒಂದು ವೀಡಿಯೋ ಮಾಡುವ ಮೂಲಕ ತಮ್ಮ ಅಳಲನ್ನು ಹೊರಹಾಕಿದ್ದಾರೆ.

ನಮ್ಮ ಮಾವನಿಗೆ ಒಂದು ಬೆಡ್​ ಅರೇಂಜ್​ ಮಾಡಿಕೊಡಿ, ದಯಮಾಡಿ ನಮ್ಮ ಮಾವನನ್ನು ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!