ಅಂತಿಮ ಪರೀಕ್ಷೆ ಗಳಿಗೆ ಹಾಜರಾತಿ ಕಡ್ಡಾಯವಲ್ಲ – ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇಲಾಖೆ ಗಿಫ್ಟ್

Team Newsnap
1 Min Read

ಕೊರೋನಾ ಕಾರಣಕ್ಕಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಹೊಸ ಗಿಫ್ಟ್ ನೀಡಿದೆ.

ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಹಾಜರಾತಿ ಇಲ್ಲದೇ ಹೋದರೂ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು.

ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಎಂಜನೀಯರಿಂಗ್ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ವಲ್ಲ. ಕನಿಷ್ಠ ಹಾಜರಾತಿ ಇಲ್ಲದೇ ಹೋದರೂ ಅಂತಿಮ‌ ಪರೀಕ್ಷೆ ಅವಕಾಶ ನೀಡುವಂತೆ ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ.

ಈಗ ವಿದ್ಯಾರ್ಥಿಗಳಿಗೆ ಪೋಷಕರು ಕಡ್ಡಾಯವಾಗಿ ಅನುಮತಿ ಪತ್ರ ನೀಡಿದ ನಂತರವೇ ಕಾಲೇಜಿಗೆ ಪ್ರವೇಶ ನೀಡುವ ಅದೇಶವಿದೆ. ಹೀಗಾಗಿ‌ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿ ಯಿಂದ ವಿನಾಯಿತಿ ನೀಡಿ ಅಂತಿಮ ಪರೀಕ್ಷೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

Share This Article
Leave a comment