January 8, 2025

Newsnap Kannada

The World at your finger tips!

mullayanagiri

ದತ್ತ ಜಯಂತಿ ಪ್ರಯುಕ್ತ ಮುಳ್ಳಯ್ಯನಗಿರಿ ಪ್ರವಾಸಿ ತಾಣಕ್ಕೆ ಪ್ರವೇಶ ಇಲ್ಲ- ಡಿಸಿ

Spread the love

ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿರುವ ಚಿಕ್ಮಮಗಳೂರು ಜಿಲ್ಲಾಡಳಿತ, ದತ್ತ ಜಯಂತಿ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 25 ರಿಂದ 30ರವರೆಗೆ ಚಿಕ್ಕಮಗಳೂರು ತಾಲ್ಲೂಕಿನ ಪ್ರಸಿದ್ಧ ಮುಳ್ಳಯ್ಯನಗಿರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿ ನಿಷೇಧಿಸಿದೆ.

ದತ್ತ ಜಯಂತಿ ಕಾರ್ಯಕ್ರಮ ಗಳು:

ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಈ ಕುರಿತಂತೆ ಆದೇಶ ಹೊರಡಿಸಿ ಡಿ. 19 ರಿಂದ ದತ್ತಪೀಠದಲ್ಲಿ ದತ್ತ ಜಯಂತಿ ಆರಂಭವಾಗಿವೆ. ಅದು ಈ ತಿಂಗಳ 29ರವರೆಗೂ ಇರಲಿದೆ. ದತ್ತ ಭಕ್ತರು ಈಗಾಗಲೇ ವ್ರತದಲ್ಲಿದ್ದಾರೆ. ಡಿ.27 ರಂದು ಅನಸೂಯ ಜಯಂತಿ, ಡಿ.28 ರಂದು ಚಿಕ್ಕಮಗಳೂರು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಭಕ್ತರು ಈ ಭಾಗಗಳಿಗೆ ಬರಲಿರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿಸಿ ಈ ಆದೇಶ ಹೊರಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!