December 23, 2024

Newsnap Kannada

The World at your finger tips!

Nirmala Sitaraman

ಸರಳತೆ, ಸಭ್ಯತೆ, ಸೌಜನ್ಯತೆಯ ಸಾಕಾರಮೂರ್ತಿ ನಿರ್ಮಲಾ ಸೀತಾರಾಮನ್

Spread the love

ಉತ್ತರ ಭಾರತದ ಹಲವು ತೀರ್ಥಕ್ಷೇತ್ರಗಳ ಯಾತ್ರೆಯಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೊಸದಿಲ್ಲಿಯ ಪೇಜಾವರ ಶಾಖಾ ಮಠಕ್ಕೆ ಭೇಟಿ ನೀಡಿ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಕೆಲವು ಗಣ್ಯರನ್ನು ಭೇಟಿ ಮಾಡಿದ್ದಾರೆ.

ಸನಾತನ ಸಂಸ್ಕೃತಿ, ಧರ್ಮ ಸಂಪ್ರದಾಯಗಳ ಬಗ್ಗೆ ಅತೀವ ಶ್ರದ್ಧೆ ಹೊಂದಿರುವ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವುಗಳನ್ನೆಂದೂ ವೈಭವೀಕರಿಸಿಕೊಂಡವರಲ್ಲ, ಪ್ರದರ್ಶಿಸಿದವರಲ್ಲ. ಸರಳತೆ ಅವರ ದೊಡ್ಡ ಗುಣ ಎನ್ನುವುದು ಅನೇಕ ಬಾರಿ ವ್ಯಕ್ತವಾಗಿದೆ.

ಪೇಜಾವರ ಶ್ರೀಗಳು ನಿವಾಸಕ್ಕೆ ಭೇಟಿ ಕೊಟ್ಟಾಗಲೂ ಶ್ರೀಗಳ ಮುಂದೆ ನೆಲದಲ್ಲೇ ಆಸೀನರಾಗಿ ಮಾತುಕತೆ ನಡೆಸಿದ್ದು ಅವರ ಸಂತಶ್ರದ್ಧೆಗೆ ಭಕ್ತಿಗೆ ಕನ್ನಡಿಯಾಗಿದೆ.

Copyright © All rights reserved Newsnap | Newsever by AF themes.
error: Content is protected !!