February 21, 2026

Newsnap Kannada

The World at your finger tips!

nikhil2 e1607084051376

ನಿಖಿಲ್ ಕುಮಾರಸ್ವಾಮಿ , ರೇವತಿ ಜಿ. ಟಿ. ದೇವೇಗೌಡರೊಂದಿಗೆ ಸಂಧಾನ ಭೋಜನ!

Spread the love

ಮಾಜಿ ಪ್ರದಾನಿ ದೇವೇಗೌಡರು ಹಾಗೂ ಕುಟುಂಬದೊಂದಿಗೆ ಮುನಿಸಿ ಕೊಂಡಿರುವ ಶಾಸಕ ಜಿ ಟಿ ದೇವೇಗೌಡರ ಜೊತೆ ಸಹ ಭೋಜನ ಮಾಡಲು ಮೂಲಕ ಪರೋಕ್ಷವಾಗಿ ಸಂಧಾನಕ್ಕೆ ಮುಂದಾದರು ನಿಖಿಲ್ ಕುಮಾರಸ್ವಾಮಿ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ನಿವಾಸಕ್ಕೆ ಅಚ್ಚರಿ ಭೇಟಿ ನೀಡಿದ ಜೆಡಿಎಸ್ ಯುವ ರಾಜ ನಿಖಿಲ್ ಕುಮಾರಸ್ವಾಮಿ, ಪತ್ನಿ ರೇವತಿ ಸಮೇತ ಅಚ್ಚರಿಯ ಭೇಟಿ ನೀಡಿ ಸಹ ಭೋಜನ ಸ್ವೀಕಾರ ಮಾಡಿ ಸಂಧಾನ ಮಾತುಕತೆ ನಡೆಸಿದರು.

nikhil1

ಮೈಸೂರಿನ ಬೋಗಾದಿಯ ಬ್ರಿಗೇಡ್ ವಿಲ್ಲಾದಲ್ಲಿರುವ ಜಿ.ಟಿ.ದೇವೇಗೌಡರ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ, ಪತ್ನಿ ರೇವತಿ ಜೊತೆ ಭೇಟಿ ನೀಡಿ ಮಧ್ಯಾಹ್ನದ ಭೋಜನ ಸ್ವೀಕಾರ ಕೂಡ ಮಾಡಿ ಕುಶಲೋಪಚಾರ ವಿಚಾರಿಸಿದರು.

ಈ ಸಂದರ್ಭದಲ್ಲಿ ನಿಖಿಲ್ ಕುಮಾರ ಸ್ವಾಮಿ ಜಿಟಿಡಿ ಮತ್ತು ಹರೀಶ್ ಜೊತೆ ಮಾತುಕತೆ ನಡೆಸಿದರು. ಆದರೆ ಮಾತುಕತೆ ವಿವರ ಗೊತ್ತಾಗಿಲ್ಲ.

nikhil

ಜಿ.ಟಿ.ದೇವೇಗೌಡರು ಈಗಲೂ ನಾನು ತಾಂತ್ರಿಕವಾಗಿ ಜೆಡಿಎಸ್ ನಲ್ಲೆ ಇದ್ದೇನೆ. ಆದರೆ ಕೆಲವು ರಾಜಕೀಯ ಕಾರಣ ಗಳಿಂದ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ನಿಖಿಲ್- ರೇವತಿ ಭೇಟಿ ವಿಶೇಷ ವಾಗಿದೆ

error: Content is protected !!