ಲೋಕಸಭಾ ಚುನಾವಣೆ ಸೋಲಿನ ಕಹಿ ಮರೆಯದ ನಿಖಿಲ್ ಕುಮಾರಸ್ವಾಮಿ

Team Newsnap
1 Min Read

ಕಳೆದ ಲೋಕಸಭಾ ಚುನಾವಣೆಯಲ್ಲಿನ ಮಂಡ್ಯ ಸೋಲನ್ನು ನಿಖಿಲ್‌ ಕುಮಾರಸ್ವಾಮಿ ಇನ್ನೂ ಮರೆತಿಲ್ಲ.

ಲೋಕಸಭೆ ಸೋಲನ್ನು ನೆನೆದು ನಿಖಿಲ್ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಬಾವುಕರಾದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ಅಂದು ಮಂಡ್ಯದ ಎಲ್ಲಾ ಶಾಸಕರು ನಾನು ಚುನಾವಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದಾಗ ಅವರ ಅಭಿಪ್ರಾಯದಂತೆ ನಾನು ಚುನಾವಣೆಗೆ ನಿಂತೆ ಎಂದರು.

ಚುನಾವಣೆಯಲ್ಲಿ ಸೋತಿರೋದು ನಂಗೆ ಚಿಂತೆ ಇಲ್ಲ ನೀವು ನಾನು ಗೆಲ್ಲುತ್ತೇನೆ ಅಂದುಕೊಂಡು ಲಕ್ಷಾಂತರ, ಕೋಟ್ಯಾಂತರ ರೂಪಾಯಿಯನ್ನು ನನ್ನ ಪರ ಬೆಟ್ಟಿಂಗ್ ಕಟ್ಟಿದ್ದೀರಿ. ಎಷ್ಟೋ ಜನ ನನ್ನ ಸೋಲಿನಿಂದ ಮನೆ-ಮಠ ಕಳೆದುಕೊಂಡಿದ್ದಾರೆ ಇದು ನನಗೆ ತುಂಬಾ ನೋವಾಗುತ್ತಿದೆ ಎಂದರು ನಿಖಿಲ್

ಆ ಚುನಾವಣೆಯಲ್ಲಿ ನನ್ನ ವಿರೋಧಯಾಗಿ ನಿಂತಿದ್ದವರಿಗೆ ಜಿಲ್ಲೆಯಲ್ಲಿ ಅಷ್ಟು ಜನ ಸಂಪರ್ಕ ಇರಲಿಲ್ಲ. ಆದರೂ ಕುಮಾರಣ್ಣನವರ ಶಕ್ತಿ ಕುಗ್ಗಿಸಲು ವಿರೋಧಿ ಬಣ ಸೃಷ್ಟಿಯಾದವು ಎಂದು ಅಂದಿನ ದಿನಗಳನ್ನು ನೆನದುಕೊಂಡರು.

ಸಂಸದೆ ಸುಮಲತಾ ಹೆಸರು ಹೇಳದೆ ನ ವಾಗ್ದಾಳಿ ನಡೆಸಿದ ನಿಖಿಲ್ ನಾನು ಸೋತರು ನನಗೆ ಬೇಸರ ಆಗಿಲ್ಲ.ನನಗೂ ಚುನಾವಣೆಗೂ ಮೊದಲು ಮಂಡ್ಯ ಕ್ಷೇತ್ರದ ಬಗೆಗೆ ಅಷ್ಟೊಂದು ಒಡನಾಟ ಇರಲಿಲ್ಲ. ಅಲ್ಲದೆ ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯ ಬೇಕಿರಲಿಲ್ಲ ಎಂದು ಹೇಳುತ್ತಲೇ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿದರು.

Share This Article
Leave a comment