ಬೆಂಗಳೂರು : ಎನ್‌ಐಎ ( NIA ) ಬೆಂಗಳೂರು ಸೇರಿದಂತೆ 7 ರಾಜ್ಯಗಳಲ್ಲಿ ದಾಳಿ ನಡೆಸಿದೆ. ಜೈಲಿನಲ್ಲಿ ಸಹಕೈದಿಗಳನ್ನು ಸೆಳೆದು ಉಗ್ರ ಕೃತ್ಯಕ್ಕೆ ಬಳಕೆ ಆರೋಪದ ಹಿನ್ನೆಲೆಯಲ್ಲಿ ಜೈಲು ಆಮೂಲಾಗ್ರೀಕರಣ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಶೋಧ ನಡೆಸಿದೆ.
ಜುಲೈ 2023 ರಲ್ಲಿ ಕೇಂದ್ರ ಅಪರಾಧ ವಿಭಾಗವು ಲಷ್ಕರ್-ಎ-ತೈಬಾ ಮಾಡ್ಯೂಲ್ ಅನ್ನು ಭೇದಿಸಿತ್ತು. ನಂತರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.ಸಿಸಿಬಿ ಪೊಲೀಸರು ಕಳೆದ ವರ್ಷ ಜುಲೈನಲ್ಲಿ ಆರ್‌ಟಿ ನಗರದ ಮನೆಯೊಂದರಿಂದ ಐವರನ್ನು ಬಂಧಿಸುವ ಮೂಲಕ ಲಷ್ಕರ್ ಭಯೋತ್ಪಾದನಾ ಘಟಕವನ್ನು ಭೇದಿಸಿದ್ದರು.
ಪೊಲೀಸರು ನಾಲ್ಕು ಜೀವಂತ ಗ್ರೆನೇಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ನಗರದಲ್ಲಿ ಆರೋಪಿಗಳು ಅಶಾಂತಿ ಸೃಷ್ಟಿಸಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರ ಚಟುವಟಿಕೆ ಕುರಿತಂತೆ ಖಚಿತ ಸುಳಿವು ಹಾಗೂ ಹಲವು ದಿನಗಳ ಟ್ರ್ಯಾಕಿಂಗ್ ಆಧಾರದ ಮೇಲೆ, ಸಿಸಿಬಿ ಪೊಲೀಸರು ಕಳೆದ ವರ್ಷ ಜುಲೈ 18 ರಂದು ಆರ್‌ಟಿ ನಗರದ ಸುಲ್ತಾನ್ ಪಾಳ್ಯದ ಮನೆಯ ಮೇಲೆ ದಾಳಿ ನಡೆಸಿ ಐವರು ಭಯೋತ್ಪಾದಕ ಶಂಕಿತರನ್ನು ಬಂಧಿಸಿದ್ದರು.
ಪೊಲೀಸರ ಪ್ರಕಾರ ನಗರದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಯೋಜಿಸುತ್ತಿದ್ದು ,ದಾಳಿಯ ಸಮಯದಲ್ಲಿಬಂಧಿತ ವ್ಯಕ್ತಿಗಳಲ್ಲಿ ಒಬ್ಬನ ಮನೆಯಲ್ಲಿ ನಾಲ್ಕು ಜೀವಂತ ಗ್ರೆನೇಡ್‌ಗಳನ್ನು ಪೊಲೀಸರು ಕಂಡುಕೊಂಡರು.ಇಂದು ರಾಜ್ಯದ ಬರ ನಿರ್ವಹಣೆ ಬಗ್ಗೆ ಮಹತ್ವದ ಸಭೆ
ಪೊಲೀಸರು ದಾಳಿಯಲ್ಲಿ 7 ದೇಶ ನಿರ್ಮಿತ ಬಂದೂಕುಗಳು ಮತ್ತು 45 ಸುತ್ತು ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ