December 22, 2024

Newsnap Kannada

The World at your finger tips!

terrorist ,NIA, arrested

ಕರ್ನಾಟಕ ಸೇರಿ 6 ರಾಜ್ಯಗಳ 13 ಕಡೆ NIA ದಾಳಿ : ರಾಜ್ಯದಲ್ಲಿ 3 ಶಂಕಿತ ಉಗ್ರರು ವಶಕ್ಕೆ

Spread the love

ದೇಶಾದ್ಯಂತ ಭಾನುವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಏಕಾಏಕಿ 6 ರಾಜ್ಯಗಳ 13 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕರ್ನಾಟಕ ಸೇರಿದಂತೆ ಒಟ್ಟು 6 ರಾಜ್ಯಗಳ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆದಿದೆ, ಐಎಸ್​ಐಎಸ್​ ಉಗ್ರ ಸಂಘಟನೆ ಚಟುವಟಿಕೆ ಸಂಬಂಧಿತ ಮಾಹಿತಿಯ ಮೇರೆಗೆ ರಾಜ್ಯದ ಕಾರವಾರದ ಭಟ್ಕಳ ಹಾಗೂ ತುಮಕೂರಿನಲ್ಲೂ ಎನ್‌ಐಎ ಮಿಂಚಿನ ಕಾರ್ಯಾಚರಣೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ಇದನ್ನು ಓದಿ –ಫಾಸಿಲ್ ಹತ್ಯೆಗೆ ಬಳಕೆ ಮಾಡಿದ ಕಾರು ಕಾರ್ಕಳ ಬಳಿ ಪತ್ತೆ

ಜೂನ್ 25 ರಂದು ಬೆಂಗಳೂರಿನಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಇದರ ಬೆನ್ನಲ್ಲೇ ತನಿಖೆ ಮುಂದುವರೆಸಿದ್ದ ಎನ್‌ಐಎ, ಜುಲೈ 31 ರಂದು ಮಧ್ಯ ಪ್ರದೇಶದ ಎರಡು ಕಡೆ, ಗುಜರಾತ್ ರಾಜ್ಯದ ನಾಲ್ಕು ಕಡೆ, ಮಹಾರಾಷ್ಟ್ರ, ಕರ್ನಾಟಕದಲ್ಲಿ ತಲಾ ಎರಡು ಕಡೆ ಹಾಗೂ ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಬೆಳ್ಳಂಬೆಳಗ್ಗೆ 4 ಗಂಟೆಗೆ ದಾಳಿ ನಡೆಸಿದೆ.

ದಾಳಿ ವೇಳೆ ಹಲವಾರು ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗಿದೆ. ಶಂಕಿತರನ್ನು ಉಗ್ರರನ್ನು ವಶಪಡಿಸಿಕೊಂಡು ಐಪಿಸಿ 153A, 153B UAPA 18b ,38, 39,40 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!