Trending

ಮುಂದಿನ ತಿಂಗಳು ಪ್ರಕಟವಾಗಲಿದೆ ಸೋನುಸೂದ್ ಲಾಕ್ ಡೌನ್ ಅನುಭವದ ಪುಸ್ತಕ!

‘ಐ ಆಮ್ ನಾಟ್ ಎ ಮೈಸೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಾಲಿವುಡ್ ನಟ ಸೋನುಸೂದ್ ಅವರ ಲಾಕ್‍ಡೌನ್ ಅನುಭವದ ಪುಸ್ತಕ ಪ್ರಕಟವಾಗಲಿದೆ.

ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ ಅನುಭವವನ್ನು ವಿವರಿಸುವ ಪುಸ್ತಕವನ್ನು ಬರೆಯುತ್ತಿದ್ದೇನೆ ಎಂದು ಈ ಹಿಂದೆ ಸೋನುಸೂದ್ ಹೇಳಿದ್ದರು.

ಲಾಕ್‍ಡೌನ್‍ನಲ್ಲಿ ಸಹಾಯವನ್ನು ನೀಡುವಾಗ ನಟ ಎದುರಿಸಿದ ಭಾವನಾತ್ಮಕ ಸವಾಲುಗಳನ್ನು ಮತ್ತು ಅನುಭವಗಳನ್ನು ‘ಐ ಆಮ್ ನಾಟ್ ಎ ಮೈಸೆ’ ಈ ಪುಸ್ತಕ ಒಳಗೊಂಡಿರುತ್ತದೆ.

ಕೆಲವರು ನನ್ನನ್ನು ಪ್ರೀತಿಯಿಂದ ವಲಸೆ ಕಾರ್ಮಿಕರ ಪಾಲಿನ ದೇವದೂತ ಎಂದು ಕರೆದರು. ಆದರೆ ನಾನು ನಿಜಕ್ಕೂ ದೇವದೂತನಲ್ಲ ನನ್ನ ಹೃದಯ ನನಗೆ ಹೇಳುವುದನ್ನು ನಾನು ಸರಳವಾಗಿ ಮಾಡುತ್ತೇನೆ. ಲಾಕ್‍ಡೌನ್ ನಿಂದಾಗಿ ಸಾವಿರಾರು ಜನ ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಬೇಕು ಎಂದು ನನ್ನ ಮನಸ್ಸು ಹೇಳಿತು ಎಂದು ಹೇಳಿದ್ದಾರೆ.

ಪರಸ್ಪರ ಸಹಾಯ ಮಾಡುವುದು ಮಾನವರಾಗಿ ನಮ್ಮ ಜವಾಬ್ದಾರಿಯಾಗಿದೆ. ಅದೇ ಕಾರಣಕ್ಕೆ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ನನ್ನ ದೇವದೂತ ಎನ್ನುವುದು ದೊಡ್ಡ ಮಾತಾಗಿದೆ. ಈ ಎಲ್ಲ ಅನುಭವಗಳನ್ನು ಹೊಂದಿರುವ ಪುಸ್ತಕ ‘ಐ ಆಮ್ ನೋ ಮೆಸೈ’ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ನಟ ಸೋನುಸೋದ್ ತಿಳಿಸಿದ್ದಾರೆ.

Team Newsnap
Leave a Comment
Share
Published by
Team Newsnap
Tags: SONU

Recent Posts

ಉದಯನಿಧಿ ಸ್ಟಾಲಿನ್ ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ನೇಮಕ

ತಮಿಳುನಾಡಿನ ಸಚಿವ ಸಂಪುಟ ಪುನಾರಚನೆಯಾಗಿದ್ದು, ಉದಯನಿಧಿ ಸ್ಟಾಲಿನ್ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ,ಉದಯನಿಧಿ ಸ್ಟಾಲಿನ್ ಅವರನ್ನ… Read More

September 29, 2024

ನಿರ್ಮಲಾ ಸೀತಾರಾಮನ್‌ ವಿರುದ್ಧ FIR ದಾಖಲು

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವರ ವಿರುದ್ಧ ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್‌ ಪಡೆದ ಆರೋಪದ… Read More

September 28, 2024

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2024 ವೇಳಾಪಟ್ಟಿ ಬಿಡುಗಡೆ

ಮೈಸೂರು: ಸರ್ಕಾರ ಹಾಗು ಜಿಲ್ಲಾಡಳಿತ ಮೈಸೂರು ದಸರಾ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು , ಮೈಸೂರು ದಸರಾ-2024ರ ವೇಳಾಪಟ್ಟಿಯನ್ನು ಬಿಡುಗಡೆ… Read More

September 28, 2024

ಭಾರಿ ಅವಘಡ : ಟಾಟಾ ಫ್ಯಾಕ್ಟರಿಯಲ್ಲಿ ಬೆಂಕಿ

ಚೆನ್ನೈ: ತಮಿಳುನಡಿನ ಕೂತನಹಳ್ಳಿಯಲ್ಲಿ ಟಾಟಾ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ತಮಿಳುನಾಡಿನ ಹೊಸೂರು ಸಮೀಪದ ಕೂತನಹಳ್ಳಿಯ… Read More

September 28, 2024

MLA ಮುನಿರತ್ನ ಮನೆ ಮೇಲೆ SIT ದಾಳಿ

ಬೆಂಗಳೂರು: ಇಂದು ಬೆಳಿಗ್ಗೆ ಬಿಜೆಪಿ MLA ಮುನಿರತ್ನ ಮನೆ ಮೇಲೆ SIT ದಾಳಿ ನಡೆಸಿದ್ದಾರೆ. ಅತ್ಯಾಚಾರ, ಜಾತಿ ನಿಂದನೆ ಹಾಗೂ… Read More

September 28, 2024

ಮುಡಾ ಹಗರಣ : ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲು

ಮೈಸೂರು: . ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ನಂತರ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿದೆ. ಮೈಸೂರಿನ… Read More

September 27, 2024