January 16, 2025

Newsnap Kannada

The World at your finger tips!

ibrahim 1

ಫೆ 14 ಕ್ಕೆ ಮುಂದಿನ ರಾಜಕೀಯ ನಿರ್ಧಾರ : ಅಲಿಂಗೌ ಸಮಾವೇಶಕ್ಕೆ ಸಿದ್ದತೆ – ಸಿಎಂ ಇಬ್ರಾಹಿಂ

Spread the love

ಫೆ 14 ಕ್ಕೆ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಅದೇ ದಿನ ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಸಿ ಎ ಇಬ್ರಾಹಿಂ ಮೈಸೂರಿನಲ್ಲಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಸಿದ್ದರಾಮಯ್ಯ ಒಬ್ಬ ಅಸಹಾಯಕ ನಾಯಕ. ಆತ ಸೌಜನ್ಯಕ್ಕೂ ನಂಗೆ ಫೋನ್ ಮಾಡಲಿಲ್ಲ ಎಂದು ದೂರಿದರು.

ಫೆಬ್ರವರಿ ಮಾಸಾಂತ್ಯದಲ್ಲಿ ದಾವಣಗೆರೆ ಅಥವಾ ಮುಂಬೈ ಕರ್ನಾಟಕದಲ್ಲಿ ಅಲಿಂಗೌ ( ಅಲ್ಪ ಸಂಖ್ಯಾತ, ಲಿಂಗಾಯತ , ಗೌಡ ಸಮುದಾಯದ ) ಸಮಾವೇಶ. ಮಾಡುತ್ತೇನೆ ಅಲ್ಲಿ ನನ್ನ ಮಂದಿನ ರಾಜಕೀಯ ನಡೆ ಬಗ್ಗೆ ಪ್ರಕಟಿಸುವುದಾಗಿ ಹೇಳಿದರು.

ನನ್ನ ಮಂದೆ ಈಗ ಮೂರು ಆಯ್ಕೆಗಳಿವೆ. ಜೆಡಿಎಸ್ , ಟಿಎಂಸಿ ಹಾಗೂ ಸಮಾಜವಾದಿ ಪಕ್ಷಗಳು ಆಹ್ವಾನಿಸಿವೆ . ನಾನು ಇನ್ನೂ ಯಾವ ತೀರ್ಮಾನವನ್ನೂ ಮಾಡಿಲ್ಲ. ಜನಾಭಿಪ್ರಾಯ ಪಡೆದು ನಿಧ೯ರಿಸುತ್ತೇನೆ ಎಂದರು.

Copyright © All rights reserved Newsnap | Newsever by AF themes.
error: Content is protected !!