Editorial

ನಾಗಲೋಟದಲ್ಲಿ ನ್ಯೂಸ್ ಸ್ನ್ಯಾಪ್

ಮಾಹಿತಿ ಪ್ರಸರಣಕ್ಕೆ ಈ ಹಿಂದೆ ಮುದ್ರಣ ಮಾಧ್ಯಮಗಳ ಅವಲಂಬನೆ ಇತ್ತು. ತಂತ್ರಜ್ಞಾನದಲ್ಲಿ ಬೆಳವಣಿಗೆಗಳಾದಂತೆ ಎಲೆಕ್ಟ್ರಾನಿಕ್ ಮಾಧ್ಯಮ ಪ್ರವೇಶವಾಯಿತು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣ (ಸೋಷಿಯಲ್ ಮೀಡಿಯಾ)ದ ಪ್ರಭಾವ ಹೆಚ್ಚುತ್ತಿದ್ದಂತೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಜತೆ ಡಿಜಿಟಲ್ ಮಾಧ್ಯಮಗಳು ಹೊಸರೂಪ ಪಡೆದುಕೊಂಡವು. ಭಾರತದಲ್ಲೀಗ ಡಿಜಿಟಲೀಕರಣ ವೇಗ ಪಡೆದುಕೊಂಡಿದೆ.

ಸಮಾಜದಲ್ಲಿ ಬದಲಾದ ಸಮಯದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಮುದ್ರಣಮಾಧ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೆ.ಎನ್.ರವಿ ಡಿಜಿಟಲ್ ಮಾಧ್ಯಮದತ್ತ ಕಣ್ಣುಹಾಯಿಸಿದ ಪರಿಣಾಮವೇ 2020 ರ ಆಗಸ್ಟ್ 28 ರಂದು ಅವರ ಸಂಪಾದತ್ವದಲ್ಲಿ ಆರಂಭಗೊಂಡಿತು “ನ್ಯೂಸ್‌ಸ್ನ್ಯಾಪ್”.

ನೋಟುಗಳು ಇಲ್ಲದಿದ್ದರೂ ಪರಿವಾಗಿಲ್ಲ ಕೈಯಲ್ಲಿರಲೇಬೇಕು ಸ್ಮಾಟ್‌ಫೋನ್ ಎಂಬ ತುಡಿತವಿರುವ ಈ ಸಂದರ್ಭದಲ್ಲಿ ಗಳಿಗೆಯಾಗುವಷ್ಟರಲ್ಲಿ ಸಮಾಜದಲ್ಲಿ ದಿನ ನಿತ್ಯ ನಡೆಯುವ ನಾನಾ ಚಟುವಟಿಕೆಗಳ ಮಾಹಿತಿ ಬೆರಳಿನ ತುದಿಗೆ ನೀಡಬೇಕೆಂಬ ಆಶಯವಿಟ್ಟುಕೊಂಡು ಸಾಕಷ್ಟು ಜನರ ಮನಸ್ಸು ಗೆದ್ದು ನಾಗಾಲೋಟದಲ್ಲಿ ಸಾಗುತ್ತಿರುವ “ನ್ಯೂಸ್‌ಸ್ನ್ಯಾಪ್ ಗೆ ಈಗ ಒಂದು ವರ್ಷ ತುಂಬಿದೆ.


ಮಾಧ್ಯಮ ಕ್ಷೇತ್ರವಲ್ಲದೆ ಇತರ ರಂಗಗಳ ಖ್ಯಾತನಾಮರ ಸಹಕಾರದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆ ಗುರಿ ದೊಡ್ಡದಾಗಿಯೇ ಇದೆ. ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ಕೃಷಿಯಲ್ಲದೆ ಸಮುದಾಯದ ಎಲ್ಲ ವರ್ಗಗಳ ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕೆನ್ನುವ ನಿಲುವು ಅಚಲವಾಗಿಯೇ ಇದೆ. ಇದಕ್ಕೆ ಹೃದಯ ವೈಶಾಲ್ಯವಿರುವ ಕನ್ನಡ ಮನಸ್ಸುಗಳ ಸ್ಪಂದನೆ, ಪ್ರೋತ್ಸಾಹವೇ ನಮಗೆ ಶ್ರೀರಕ್ಷೆ ಎಂದು ಹೇಳಬೇಕಾಗಿಲ್ಲ.

ಹೊಸತನಕ್ಕೆ ಹಾತೊರೆಯುವ ಬಯಕೆ ಇದ್ದರೆ ಹೊಸ ಹೊಸ ವಿಚಾರಗಳಿಗೂ ಜಾಗ ಸಿಕ್ಕೇ ಸಿಗುತ್ತದೆ. ತೆರೆದ ಮನಸ್ಸಿನೊಂದಿಗೆ ಮುನ್ನಡೆಯುತ್ತೇವೆ ಎಂದು ಭರವಸೆಯನ್ನೂ ಕೊಡುತ್ತೇವೆ.

ಕೆ.ಸಿ.ಸತ್ಯಪ್ರಕಾಶ್
ಕಾರ್ಯನಿರ್ವಾಹಕ ಸಂಪಾದಕ ನ್ಯೂಸ್‌ಸ್ನ್ಯಾಪ್
Team Newsnap
Leave a Comment
Share
Published by
Team Newsnap

Recent Posts

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 12 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ದಾಖಲಾಗಿದೆ. 24… Read More

May 12, 2024

ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು

ನಮ್ಮ ಪೋಲಿಸರು ಸಮರ್ಥರಿದ್ದಾರೆ ⁠ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More

May 10, 2024

ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More

May 10, 2024

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ

ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More

May 10, 2024

ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More

May 10, 2024

ಪ್ರಜ್ವಲ್ ವಿರುದ್ಧ ಮೂರನೇ ಎಫ್ ಐ ಆರ್ ದಾಖಲಿಸಲು ಎಸ್ ಐಟಿ ಸಿದ್ದತೆ

ಬೆಂಗಳೂರು:ಪೆನ್‍ಡ್ರೈವ್ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು… Read More

May 10, 2024