ಪುಣೆ: 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ವಾಷಿಂಗ್ಟನ್ ಸುಂದರ್ ಮಾರಕ ಬೌಲಿಂಗ್ ಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ 259ರನ್ ಗಳಿಗೆ ಆಲೌಟ್ ಆಗಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 259 ರನ್ ಗೆ ಆಲೌಟ್ ಆಗಿದೆ.
ನ್ಯೂಜಿಲೆಂಡ್ ದಾಂಡಿಗರನ್ನು ಭಾರತದ ವೇಗಿ ವಾಷಿಂಗ್ಟನ್ ಸುಂದರ್ ಬಿಟ್ಟೂ ಬಿಡದೇ ಕಾಡಿ ಒಟ್ಟು 7 ವಿಕೆಟ್ ಕಬಳಿಸಿದರು.
ಆರಂಭದಲ್ಲಿ ಭಾರತದ ಆರ್ ಅಶ್ವಿನ್ ಆರಂಭಿಕ ಆಘಾತ ನೀಡಿದರು. ಆರಂಭಿಕ ಆಟಗಾರ ಹಾಗೂ ನಾಯಕ ಟಾಮ್ ಲಾಥಮ್ (15 ರನ್) ಎಲ್ ಬಿ ಬಲೆಗೆ ಕೆಡವಿದ ಅಶ್ವಿನ್ ಬಳಿಕ ವಿಲ್ ಯಂಗ್ (18 ರನ್) ರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಡೆವಾನ್ ಕಾನ್ವೆ (76 ರನ್) ಮತ್ತು ರಚಿನ್ ರವೀಂದ್ರ (65 ರನ್) ನ್ಯೂಜಿಲೆಂಡ್ ಇನ್ನಿಂಗ್ಸ್ ಗೆ ಜೀವ ತುಂಬಿದರು. ಆದರೆ ಈ ಹಂತದಲ್ಲಿ 76 ರನ್ ಗಳಿಸಿದ್ದ ಕಾನ್ವೆ ಮತ್ತದೇ ಅಶ್ವಿನ್ ಬೌಲಿಂಗ್ ನಲ್ಲಿ ಔಟಾದರು. ರಚಿನ್ ರವೀಂದ್ರ ಕೂಡ ವಾಷಿಂಗ್ಟನ್ ಸುಂದರ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು.
ಆ ಬಳಿಕ ಮೈದಾನದಲ್ಲಿ ನಡೆದದ್ದು ವಾಷಿಂಗ್ಟನ್ ಸುಂದರ್ ರ ಅದ್ಭುತ ಬೌಲಿಂಗ್ ಪ್ರದರ್ಶನ. ರವೀಂದ್ರ ವಿಕೆಟ್ ಪಡೆದ ಬಳಿಕ ಲಯ ಕಂಡುಕೊಂಡ ವಾಷಿಂಗ್ಟನ್ ಸುಂದರ್ ಒಬ್ಬರ ನಂತರ ಒಬ್ಬರಂತೆ ನ್ಯೂಜಿಲೆಂಡ್ ಬ್ಯಾಟರ್ ಗಳನ್ನು ಪೆವಿಲಿಯನ್ ಗೆ ಅಟ್ಟಿದರು. ಈ ಪೈಕಿ ಕೆಳ ಕ್ರಮಾಂಕದಲ್ಲಿ ಮಿಚೆಲ್ ಸ್ಯಾಂಥ್ನರ್ ಮಾತ್ರ 33 ರನ್ ಗಳಿಸಿ ನ್ಯೂಜಿಲೆಂಡ್ ಇನ್ನಿಂಗ್ಸ್ ಗೆ ಜೀವ ತುಂಬುವ ಕೆಲಸ ಮಾಡಿದರು.ಇದನ್ನು ಓದಿ –ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ನೋಟಿಸ್
ಆದರೆ ಉಳಿದಾವ ಆಟಗಾರರೂ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಲ್ಲುವ ಕೆಲಸ ಮಾಡಲಿಲ್ಲ. ವಿಲ್ ಯಂಗ್ (18 ರನ್), ಡರಿಲ್ ಮೆಚೆಲ್ (18), ಟಾಮ್ ಬ್ಲಂಡಲ್ (3), ಗ್ಲೇನ್ ಫಿಲಿಪ್ಸ್ (9), ಟಿಮ್ ಸೌಥಿ (5) ಮತ್ತು ಎಜಾಜ್ ಪಟೇಲ್ (4) ಕೂಡ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು.
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ