January 29, 2026

Newsnap Kannada

The World at your finger tips!

puneeth

‘ಯುವರತ್ನ’ ಹೊಸ ಪೋಸ್ಟರ್ ಬಿಡುಗಡೆ: ಅಪ್ಪು ಫ್ಯಾನ್ಸ್ ಗೆ ಸಂಭ್ರಮ

Spread the love

ದಸರಾ ಹಬ್ಬಕ್ಕೆ ಪುನೀತ್ ರಾಜ್‌ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.

ಹೊಸ ಪೋಸ್ಟರ್‌ನಲ್ಲಿ ಸಖತ್ ರಗಡ್ ಲುಕ್‌ನಲ್ಲಿ ನಟ ಪುನೀತ್ ರಾಜ್‌ ಕುಮಾರ್ ಕಾಣಿಸಿಕೊಂಡಿದ್ದಾರೆ. ಪುನೀತ್ ಗಡ್ಡಧಾರಿಯಾಗಿ ಹೊಸ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪುನೀತ್ ಗಡ್ಡಧಾರಿಯಾಗಿ ಕಾಣಿಸಿಕೊಂಡಿರುವುದು ಬಹಳ ಅಪರೂಪ, ಬಹುತೇಕ ಇದೇ ಮೊದಲ ಬಾರಿಗೆ ಪುನೀತ್ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್ ಅವರಿಗೆ ಬಿಯರ್ಡ್ ಲುಕ್ ಸಖತ್ತಾಗಿ ಒಪ್ಪುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಪುನೀತ್ ಅವರ ಬಿಯರ್ಡ್ ಲುಕ್‌ನ ಫೋಟೊ ಒಂದು ಸಖತ್ ವೈರಲ್ ಆಗಿತ್ತು. ಬಿಯರ್ಡ್ ಲುಕ್, ಪುನೀತ್ ಅಭಿಮಾನಿಗಳಿಗೆ ಬಹಳವೇ ಇಷ್ಟವಾಗಿತ್ತು. ಹಾಗಾಗಿ ಬಿಯರ್ಡ್‌ ಲುಕ್‌ನ ಪೋಸ್ಟರ್ ಅನ್ನೇ ಬಿಡುಗಡೆ ಮಾಡಲು ಚಿತ್ರತಂಡ ಮೊದಲೇ ನಿರ್ಧರಿಸಿದಂತಿದೆ.

ಪುನೀತ್ ಅವರ ಬಿಯರ್ಡ್‌ ಲುಕ್‌ನ ಪೋಸ್ಟರ್ ಅನ್ನು ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಹತ್ತು ದಿನದ ಹಿಂದೆಯೇ ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಟ್ವಿಟ್ಟರ್‌ನಲ್ಲಿ ಘೋಷಿಸಿದ್ದರು. ಅಂತೆಯೇ ಈಗ ಪೋಸ್ಟರ್ ಬಿಡುಗಡೆ ಆಗಿದೆ.

ಯುವರತ್ನ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಹಾಡಿಗಾಗಿ ವಿದೇಶಕ್ಕೆ ಹೋಗಬೇಕಿದ್ದ ಚಿತ್ರತಂಡ, ಕೊರೊನಾ ಕಾರಣದಿಂದ ಭಾರತದ ಕೆಲವು ಪ್ರದೇಶಗಳಲ್ಲಿಯೇ ಚಿತ್ರೀಕರಣ ಮುಗಿಸಿದೆ. ಸಿನಿಮಾವು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಮಂದಿರಗಳು ಸಾಮಾನ್ಯ ಸ್ಥಿತಿಗೆ ಬಂದ ನಂತರ ಯುವರತ್ನ ಬಿಡುಗಡೆ ಆಗುವ ಸಾಧ್ಯತೆ ಇದೆ.

error: Content is protected !!