December 23, 2024

Newsnap Kannada

The World at your finger tips!

129528 tfpaqbkkcb 1571724948

ನ್ಯೂ ಇಯರ್ ಸಂಭ್ರಮ ಆಚರಣೆ, ಪಾರ್ಟಿಗಳಿಗೆ ಬ್ರೇಕ್

Spread the love

ಕೋವಿಡ್ ಎರಡನೇ ಹಂತಕ್ಕೆ ಕಾಲಿಡುವ ಸೂಚನೆ ಹಿನ್ನಲೆಯಲ್ಲಿ ಈ ವರ್ಷದ ಡಿಸೆಂಬರ್ 31 ರ ರಾತ್ರಿ ನ್ಯೂ ಇಯರ್ ಸಂಭ್ರಮ ಆಚರಣೆಗೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ.

ಈ ನಡುವೆ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ ಆಚರಣೆ ಅವಕಾಶ ನೀಡುವುದಿಲ್ಲ ಎಂದು ಬಿ ಬಿ‌ಎಂ ಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನ ಎಂ ಜಿ ರಸ್ತೆ. ಬ್ರಿಗೇಡ್ ರಸ್ತೆ ಸೇರಿದಂತೆ ಬೆಂಗಳೂರಿನ ಎಲ್ಲಾ ಕಡೆ ರಾತ್ರಿ ಪಾಟಿ೯ಗಳಿಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ ಎಂದರು.

ಗೃಹ ಸಚಿವ ಬೊಮ್ಮಾಯಿ ಮಾತನಾಡಿ,‌ ಹೊಸ ವರ್ಷದ ಸಂಭ್ರಮ ಆಚರಣೆಗೆ ಈ ಬಾರಿ ಬ್ರೇಕ್ ಹಾಕುವುದರ ಬಗ್ಗೆ ಚರ್ಚೆಗಳು ನಡೆದಿವೆ. ಹೊಸ ವರ್ಷದ ಸಂಭ್ರಮಕ್ಕೆ ಪಾರ್ಟಿ ಮಾಡುವುದನ್ನು ಕೂಡ ಕಡಿವಾಣ ಹಾಕಲು ಚಿಂತನೆ ನಡೆದಿದೆ. ಸಧ್ಯದಲ್ಲೇ ನಿರ್ಧರಿಸಲಾಗಿದೆ‌ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!