January 5, 2025

Newsnap Kannada

The World at your finger tips!

YADIYURAPPA1

ನೂತನ ಸಚಿವರ ಖಾತೆ ಹಂಚಿಕೆಗೆ ಲೆಕ್ಕಾಚಾರ ಆರಂಭ : ಕೆಲವು ಸಚಿವರ ಖಾತೆ ಅದಲು ಬದಲು ಸಾಧ್ಯತೆ?

Spread the love

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಮುಗಿಸಿ ಹೋಗುವುದಕ್ಕಿಂತ ಮುಂಚೆ ನೂತನ ಸಚಿವರ ಖಾತೆ ಹಂಚಿಕೆ , ಕೆಲವು ಖಾತೆ ಅದಲು- ಬದಲು‌ ಚಚೆ೯ ಮಾಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ.

ನೂತನ ಸಚಿವರಿಗೆ ಇಂದು ಸಂಜೆ ಖಾತೆಗಳ ಹಂಚಿಕೆಯಾಗುವ ಸಂಭವವಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಚರ್ಚಿಸಿಯೇ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದರು.

ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಕೆಲವು ಸಚಿವರ ಖಾತೆ ಬದಲಾವಣೆ ಸೇರಿದಂತೆ ಮುಖ್ಯಮಂತ್ರಿಯಡಿಯೂರಪ್ಪ ಸಂಪುಟದಲ್ಲೇ ಸಣ್ಣ ಪ್ರಮಾಣದ ಮೇಜರ್ ಸರ್ಜರಿ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈ ಸಂಜೆ ಸಚಿವ ಅಮಿತ್ ಶಾ ನವದೆಹಲಿಗೆ ಹಿಂದಿರುಗುತ್ತಾರೆ. ನಂತರ ಯಾರಿಗೆ ಯಾವ ಖಾತೆ ಎಂಬುದು ತೀರ್ಮಾನವಾಗಲಿದೆ.

ಕೆಲವು ಸಚಿವರ ಖಾತೆಗಳನ್ನು ಅದಲು-ಬದಲು ಮಾಡುವ ನಿರೀಕ್ಷೆಯಿದೆ. ಅದು ನಿಜವೇ ಆದರೆ ಗೃಹ, ಕಂದಾಯ, ಬೃಹತ್ ಕೈಗಾರಿಕೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಬದಲಾವಣೆಯಾಗುವ ಸಂಭವ ಇದ್ದೇ ಇದೆ.

ಸಂಭವನೀಯವಾಗಿ ಯಾರಿಗೆ ? ಯಾವ ಖಾತೆ ? ಇದು ಇನ್ನೂ ಲೆಕ್ಕಾಚಾರ :

  • ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಕಂದಾಯ
  • ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್‍ಗೆ ಗೃಹ ಖಾತೆ
  • ಕಂದಾಯ ಸಚಿವ ಆರ್.ಅಶೋಕ್‍ಗೆ ಸದ್ಯ ಸಿಎಂ ಬಳಿ ಇರುವ ಬೆಂಗಳೂರು ನಗರಾಭಿವೃದ್ಧಿ ಖಾತೆ
  • ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಇಂಧನ ಖಾತೆ
  • ಸಚಿವ ಉಮೇಶ್ ಕತ್ತಿಗೆ ಪಂಚಾಯತಿ ರಾಜ್ಯ ಖಾತೆ
  • ಮುರುಗೇಶ್ ನಿರಾಣಿಗೆ ಬೃಹತ್ ಕೈಗಾರಿಕಾ ಖಾತೆ
  • ಉಮೇಶ್ ಕತ್ತಿ ತಮಗೆ ಇಂಧನ ಖಾತೆಯನ್ನು ನೀಡಬೇಕೆಂದು ಕೇಳಿದ್ದರೆ, ನಿರಾಣಿ ಬೃಹತ್ ಕೈಗಾರಿಕಾ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ.
  • ಮಹದೇವಪುರ ಶಾಸಕ ಅವರ ಲಿಂಬಾವಳಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೇಳಿದ್ದಾರೆ.
  • ಸಚಿವ ಆರ್.ಶಂಕರ್‍ ಅಬಕಾರಿ
  • ಸಿ.ಪಿ.ಯೋಗೇಶ್ವರ್‍ ಕನ್ನಡ ಮತ್ತು ಸಂಸ್ಕಂತಿ ಯುವಜನ ಸೇವೆ ಖಾತೆ

ಅಂತಿಮವಾಗಿ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಸಿಎಂ ಯಡಿಯೂರಪ್ಪ ಇನ್ನೊಂದು ಬಾರಿ ಅಮಿತ್ ಷಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಚರ್ಚಿಸಿ ಸಂಜೆ ಬಳಿಕ ಯಾವುದೇ ಕ್ಷಣದಲ್ಲಿ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಬಹುದು.

Copyright © All rights reserved Newsnap | Newsever by AF themes.
error: Content is protected !!