Main News

ಕೇಂದ್ರ ಬಜೆಟ್ ಮಂಡನೆ : ಮೆಟ್ರೋ, ರಸ್ತೆ, ರೈಲಿಗೆ ಆದ್ಯತೆ – ವ್ಯಾಕ್ಸಿನ್ ಗೆ 35 ಸಾವಿರ ಕೋಟಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್‌ 2021-22 ನೇ ಸಾಲಿನ ಬಜೆಟ್ ಇಂದು ಮಂಡಿಸಿದರು. ಬಜೆಟ್ ಭಾಷಣದ ಆರಂಭದಲ್ಲಿ ವಿಪಕ್ಷಗಳು ಮಾಮೂಲಿಯಂತೆ ಕೂಗಾಟ ಆರಂಭಿಸಿದ್ದರೂ ತರುವಾಯ ತಮ್ಮ ಕೂಗಾಟ ಚೀರಾಟ ನಿಲ್ಲಿಸಿದರು.

ಈ ಬಾರಿ ಬಜೆಟ್ನಲ್ಲಿ ಕೊರೊನಾ ವ್ಯಾಕ್ಸಿನ್ ಗಾಗಿ 35 ಸಾವಿರ ಕೋಟಿ ರು.ಮೀಸಲಿಟ್ಟಿದ್ದಾರೆ.

20 ವರ್ಷ ಹಳೆಯದಾದ ವಾಹನಗಳನ್ನು ಸ್ಕ್ಯಾಪಿಂಗ್ ಮಾಡುವ ಕಾನೂನು ಜಾರಿಗೊಳಿಸುವುದಾಗಿ ವಿತ್ತ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.

ಬಜೆಟ್ ನ ಮುಖ್ಯಾಂಶಗಳು:

  • ಉತ್ಪಾದನಾ ವಲಯಕ್ಕೆ ಒತ್ತು
  • ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ ಯೋಜನೆ ಘೋಷಣೆ
  • 7 ಟೆಕ್ಸ್ ಟೈಲ್ ಪಾರ್ಕ್ ಗಳ ಸ್ಥಾಪನೆ
  • 13 ವಲಯಗಳಲ್ಲಿ ಆತ್ಮನಿರ್ಭರ ಭಾರತ ಯೋಜನೆ ಜಾರಿ
  • ಭಾರತಕ್ಕೆ ಬರಲಿದೆ ಇನ್ನೂ 2 ವ್ಯಾಕ್ಸಿನ್
  • ನಗರಗಳಲ್ಲಿ ನೀರಿಗಾಗಿ 87 ಸಾವಿರ ಕೋಟಿ ರೂ. ವಿನಿಯೋಗ
  • ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ ಹೆಚ್ಚಳ

ರೈಲು ಯೋಜನೆಗಳಿಗೆ ಎಷ್ಟು ಹಣ :

  • ರೈಲ್ವೇಯಲ್ಲಿ ಮಿಷನ್- 2030 ಘೋಷಣೆ
  • ಬೆಂಗಳೂರು ಮೆಟ್ರೋ ಯೋಜನೆಗೆ
    14 ಸಾವಿರ ಕೋಟಿರೂ. ಅನುದಾನ
  • ಆಟೋಮೇಟಿಕ್ ರೈಲ್ವೇ ಸುರಕ್ಷಾ ವ್ಯವಸ್ಥೆ ಜಾರಿ
  • ನಗರಗಳಿಗೆ ವಿಶೇಷ ಅನುದಾನ ಘೋಷಣೆ
  • ಮೆಟ್ರೋ ರೈಲು ಯೋಜನೆಗಳಿಗೆ 18 ಸಾವಿರ ಕೋಟಿ ರೂ. ಅನುದಾನ
  • 1,016 ಕಿ.ಮೀ ಮೆಟ್ರೋ ರೈಲು ಮಾರ್ಗ ಶೀಘ್ರವೇ ಆರಂಭ
  • ಮೆಟ್ರೋ ರೈಲು ಯೋಜನೆಯಲ್ಲಿ ಖಾಸಗಿ ಸಹಭಾಗಿತ್ವ

ಯಾವುದಕ್ಕೆ ಎಷ್ಟು ಬಂಡವಾಳ ಹೂಡಿಕೆ:

  • ಬಂಡವಾಳ ಹೂಡಿಕೆಗೆ 5.5 ಲಕ್ಷ ಕೋಟಿ ರೂ.
  • 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
  • ಸಾಧನೆ ತೋರುವ ಇಲಾಖೆಗಳಿಗೆ 40 ಸಾವಿರ ಕೋಟಿ ರು. ಅನುದಾನ
  • ತಮಿಳುನಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿ 1.3 ಲಕ್ಷ ಕೋಟಿ ರೂ. ಅನುದಾನ
  • ಕೇರಳಕ್ಕೆ 65 ಸಾವಿರ ಕೋಟಿ, ಪಶ್ಚಿಮ ಬಂಗಾಳಕ್ಕೆ 25 ಸಾವಿರ ಕೋಟಿ ರೂ. ಅನುದಾನ
  • 500 ನಗರಗಳು ಅಮೃತ ನಗರಗಳಾಗಿ ಬದಲಾವಣೆ
  • 35 ಸಾವಿರ ಕೋಟಿ ರೂ. ಕೋವಿಡ್ ಲಸಿಕೆಗಾಗಿ ವಿನಿಯೋಗ
  • ಏರ್ ಇಂಡಿಯಾ ಖಾಸಗಿಯವರಿಗೆ ಮಾರಾಟ
  • ಕೃಷಿ ಬೆಂಬಲ ಹೆಚ್ಚಳ
  • ಗೋಧಿಗಾಗಿ 33 ಸಾವಿರ ಕೋಟಿ ರೂ. ಬೆಂಬಲ ಬೆಲೆ ಕೊಟ್ಟಿದ್ದೇವೆ
  • ಆಹಾರ ಧಾನ್ಯಗಳ ಖರೀದಿಗಾಗಿ 1 ಲಕ್ಷದ 41 ಸಾವಿರದ 930 ಕೋಟಿ ವೆಚ್ಚ
  • ಬೇಳೆಕಾಳುಗಳ ಖರೀದಿಗಾಗಿ 10 ಸಾವಿರದ 530 ಕೋಟಿ

ಎಲ್ಐಸಿ ಯಲ್ಲಿ ಬಂಡವಾಳ ಹಿಂತೆಗೆತ:

  • ಬ್ಯಾಂಕುಗಳಿಗೆ ಮತ್ತಷ್ಟು ಸರ್ಕಾರಿ ದುಡ್ಡು
  • ಬ್ಯಾಂಕುಗಳಿಗೆ 20 ಸಾವಿರ ಕೋಟಿ ರೂ.
  • ವಿಮೆ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೆಚ್ಚಳ
  • ಸೋಲಾರ್ ಶಕ್ತಿ ಯೋಜನೆಯಲ್ಲಿ 10 ಸಾವಿರ ಕೋಟಿ ರೂ. ಅನುದಾನ
  • ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ
  • ಎಲ್ ಐ ಸಿ ಯಲ್ಲೂ ಬಂಡವಾಳ ಹಿಂತೆಗೆತ ಘೋಷಣೆ
Team Newsnap
Leave a Comment
Share
Published by
Team Newsnap

Recent Posts

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ

ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)… Read More

May 15, 2024

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ

ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More

May 15, 2024

ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು : ಅಮಿತ್‌ ಶಾ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಷಾ ಬುಧವಾರ ಪಾಕ್ ಆಕ್ರಮಿತ ಕಾಶ್ಮೀರ (POK) ಮೇಲೆ ಭಾರತದ ಸಾರ್ವಭೌಮತ್ವವನ್ನು… Read More

May 15, 2024

ಪೆನ್ ಡ್ರೈವ್ ಕೇಸ್: ಹಾಸನದ 18 ಕಡೆಗಳಲ್ಲಿ ಎಸ್ ಐಟಿ ಶೋಧ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಹೊಂದಿದ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ… Read More

May 15, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 15 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,750 ರೂಪಾಯಿ ದಾಖಲಾಗಿದೆ. 24… Read More

May 15, 2024

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024