ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ 2021-22 ನೇ ಸಾಲಿನ ಬಜೆಟ್ ಇಂದು ಮಂಡಿಸಿದರು. ಬಜೆಟ್ ಭಾಷಣದ ಆರಂಭದಲ್ಲಿ ವಿಪಕ್ಷಗಳು ಮಾಮೂಲಿಯಂತೆ ಕೂಗಾಟ ಆರಂಭಿಸಿದ್ದರೂ ತರುವಾಯ ತಮ್ಮ ಕೂಗಾಟ ಚೀರಾಟ ನಿಲ್ಲಿಸಿದರು.
ಈ ಬಾರಿ ಬಜೆಟ್ನಲ್ಲಿ ಕೊರೊನಾ ವ್ಯಾಕ್ಸಿನ್ ಗಾಗಿ 35 ಸಾವಿರ ಕೋಟಿ ರು.ಮೀಸಲಿಟ್ಟಿದ್ದಾರೆ.
20 ವರ್ಷ ಹಳೆಯದಾದ ವಾಹನಗಳನ್ನು ಸ್ಕ್ಯಾಪಿಂಗ್ ಮಾಡುವ ಕಾನೂನು ಜಾರಿಗೊಳಿಸುವುದಾಗಿ ವಿತ್ತ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.
ಬಜೆಟ್ ನ ಮುಖ್ಯಾಂಶಗಳು:
- ಉತ್ಪಾದನಾ ವಲಯಕ್ಕೆ ಒತ್ತು
- ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ ಯೋಜನೆ ಘೋಷಣೆ
- 7 ಟೆಕ್ಸ್ ಟೈಲ್ ಪಾರ್ಕ್ ಗಳ ಸ್ಥಾಪನೆ
- 13 ವಲಯಗಳಲ್ಲಿ ಆತ್ಮನಿರ್ಭರ ಭಾರತ ಯೋಜನೆ ಜಾರಿ
- ಭಾರತಕ್ಕೆ ಬರಲಿದೆ ಇನ್ನೂ 2 ವ್ಯಾಕ್ಸಿನ್
- ನಗರಗಳಲ್ಲಿ ನೀರಿಗಾಗಿ 87 ಸಾವಿರ ಕೋಟಿ ರೂ. ವಿನಿಯೋಗ
- ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ ಹೆಚ್ಚಳ
ರೈಲು ಯೋಜನೆಗಳಿಗೆ ಎಷ್ಟು ಹಣ :
- ರೈಲ್ವೇಯಲ್ಲಿ ಮಿಷನ್- 2030 ಘೋಷಣೆ
- ಬೆಂಗಳೂರು ಮೆಟ್ರೋ ಯೋಜನೆಗೆ
14 ಸಾವಿರ ಕೋಟಿರೂ. ಅನುದಾನ - ಆಟೋಮೇಟಿಕ್ ರೈಲ್ವೇ ಸುರಕ್ಷಾ ವ್ಯವಸ್ಥೆ ಜಾರಿ
- ನಗರಗಳಿಗೆ ವಿಶೇಷ ಅನುದಾನ ಘೋಷಣೆ
- ಮೆಟ್ರೋ ರೈಲು ಯೋಜನೆಗಳಿಗೆ 18 ಸಾವಿರ ಕೋಟಿ ರೂ. ಅನುದಾನ
- 1,016 ಕಿ.ಮೀ ಮೆಟ್ರೋ ರೈಲು ಮಾರ್ಗ ಶೀಘ್ರವೇ ಆರಂಭ
- ಮೆಟ್ರೋ ರೈಲು ಯೋಜನೆಯಲ್ಲಿ ಖಾಸಗಿ ಸಹಭಾಗಿತ್ವ
ಯಾವುದಕ್ಕೆ ಎಷ್ಟು ಬಂಡವಾಳ ಹೂಡಿಕೆ:
- ಬಂಡವಾಳ ಹೂಡಿಕೆಗೆ 5.5 ಲಕ್ಷ ಕೋಟಿ ರೂ.
- 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
- ಸಾಧನೆ ತೋರುವ ಇಲಾಖೆಗಳಿಗೆ 40 ಸಾವಿರ ಕೋಟಿ ರು. ಅನುದಾನ
- ತಮಿಳುನಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿ 1.3 ಲಕ್ಷ ಕೋಟಿ ರೂ. ಅನುದಾನ
- ಕೇರಳಕ್ಕೆ 65 ಸಾವಿರ ಕೋಟಿ, ಪಶ್ಚಿಮ ಬಂಗಾಳಕ್ಕೆ 25 ಸಾವಿರ ಕೋಟಿ ರೂ. ಅನುದಾನ
- 500 ನಗರಗಳು ಅಮೃತ ನಗರಗಳಾಗಿ ಬದಲಾವಣೆ
- 35 ಸಾವಿರ ಕೋಟಿ ರೂ. ಕೋವಿಡ್ ಲಸಿಕೆಗಾಗಿ ವಿನಿಯೋಗ
- ಏರ್ ಇಂಡಿಯಾ ಖಾಸಗಿಯವರಿಗೆ ಮಾರಾಟ
- ಕೃಷಿ ಬೆಂಬಲ ಹೆಚ್ಚಳ
- ಗೋಧಿಗಾಗಿ 33 ಸಾವಿರ ಕೋಟಿ ರೂ. ಬೆಂಬಲ ಬೆಲೆ ಕೊಟ್ಟಿದ್ದೇವೆ
- ಆಹಾರ ಧಾನ್ಯಗಳ ಖರೀದಿಗಾಗಿ 1 ಲಕ್ಷದ 41 ಸಾವಿರದ 930 ಕೋಟಿ ವೆಚ್ಚ
- ಬೇಳೆಕಾಳುಗಳ ಖರೀದಿಗಾಗಿ 10 ಸಾವಿರದ 530 ಕೋಟಿ
ಎಲ್ಐಸಿ ಯಲ್ಲಿ ಬಂಡವಾಳ ಹಿಂತೆಗೆತ:
- ಬ್ಯಾಂಕುಗಳಿಗೆ ಮತ್ತಷ್ಟು ಸರ್ಕಾರಿ ದುಡ್ಡು
- ಬ್ಯಾಂಕುಗಳಿಗೆ 20 ಸಾವಿರ ಕೋಟಿ ರೂ.
- ವಿಮೆ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೆಚ್ಚಳ
- ಸೋಲಾರ್ ಶಕ್ತಿ ಯೋಜನೆಯಲ್ಲಿ 10 ಸಾವಿರ ಕೋಟಿ ರೂ. ಅನುದಾನ
- ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ
- ಎಲ್ ಐ ಸಿ ಯಲ್ಲೂ ಬಂಡವಾಳ ಹಿಂತೆಗೆತ ಘೋಷಣೆ
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ