ನವದೆಹಲಿ: ಆಕ್ಸಿಜನ್ ಕೊರತೆ 20 ಕೊರೋನಾ ರೋಗಿಗಳ ಸಾವು

Team Newsnap
1 Min Read

ಆಕ್ಸಿಜನ್ ಕೊರತೆ ಹಿನ್ನೆಲೆ ದೆಹಲಿಯ ಜಯಪುರ ಗೋಲ್ಡನ್ ಆಸ್ಪತ್ರೆಯಲ್ಲಿ 20 ರೋಗಿಗಳು ಸಾವನ್ನಪ್ಪಿದ್ದಾರೆ.

ಬತ್ರಾ ಮತ್ತು ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಎಮೆರ್ಜೆನ್ಸಿ ಉಂಟಾಗಿದೆ. ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಸಮರ್ಪಕವಾಗಿ ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ. ಗಂಭೀರ ಸ್ಥಿತಿಯಲ್ಲಿದ್ದ ಸುಮಾರು 20 ರೋಗಿಗಳು ಪ್ರಾಣವಾಯು ಇಲ್ಲದೆ ಸಾವನ್ನಪ್ಪಿದ್ದಾರೆ.

ಈ ವಿಷಯವನ್ನು ಜಯಪುರ ಗೋಲ್ಡ್ ಆಸ್ಪತ್ರೆಯ ಎಂಡಿ ಡಾ.ಡಿ.ಕೆ.ಬಲೂಜಾ ತಿಳಿಸಿ, ಬತ್ರಾ ಆಸ್ಪತ್ರೆಯಲ್ಲಿ ಸದ್ಯ ಕೇವಲ ಒಂದು ಟ್ಯಾಂಕ್ ಅಕ್ಸಿಜನ್ ಲಭ್ಯವಿದೆ. ಆಸ್ಪತ್ರೆಗೆ 500 ಕೆಜಿ ಆಕ್ಸಿಜನ್ ಟ್ರಕ್ ಮೂಲಕ ತಲುಪಿಸಲಾಗುತ್ತಿದೆ. ಇದು ಆಕ್ಸಿಜನ್ ಸಿಕ್ಕ ನಂತರ 1 ಗಂಟೆಯಷ್ಟೇ ಬರಲಿದೆ.

ಆಸ್ಪತ್ರೆಯಲ್ಲಿ 260 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಆಕ್ಸಿಜನ್ ಪೂರೈಕೆ ಪ್ರಮಾಣ ಹೆಚ್ಚಳವಾಗಬೇಕಿದೆ
ಬತ್ರಾ ಆಸ್ಪತ್ರೆಯಲ್ಲಿಯ ಸುಮಾರು 205 ರೋಗಿಗಳಿಗೆ ಆಕ್ಸಿಜನ್ ಅತ್ಯವಶ್ಯಕವಿದೆ. ನಾವು ಸಹ ತಾತ್ಕಾಲಿಕವಾಗಿ ಆಕ್ಸಿಜನ್ ಸಿಲಿಂಡರ್ ಗಳ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಐಸಿಯುನಲ್ಲಿಯ ರೋಗಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ ಎಂದು ಹೇಳಿದರು.

Share This Article
Leave a comment