January 9, 2025

Newsnap Kannada

The World at your finger tips!

appu daghter

ದೆಹಲಿಗೆ ಬಂದ ಅಪ್ಪು ಪುತ್ರಿ ಧೃತಿ : 4.15 ಕ್ಕೆ ಬೆಂಗಳೂರಿಗೆ – ನಾಳೆ ಅಂತ್ಯಕ್ರಿಯೆ – ಸಿಎಂ ಬೊಮ್ಮಾಯಿ

Spread the love

ಪವರ್​​ಸ್ಟಾರ್ ಪುನೀತ್ ರಾಜ್​ಕುಮಾರ್​ ಪುತ್ರಿ ಧೃತಿ ನ್ಯೂಯಾರ್ಕ್​​ನಿಂದ ದೆಹಲಿಗೆ ಆಗಮಿಸಿದರು.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ಹೊತ್ತಿನಲ್ಲಿ ಬೆಂಗಳೂರಿನತ್ತ ಹೊರಡಲಿದ್ದಾರೆ.

ಎಮಿಗ್ರೇಷನ್ ಕ್ಲಿಯರೆನ್ಸ್, ಭದ್ರತೆ ತಪಾಸಣೆ ಸೇರಿ ಹಲವು ಕೆಲಸಗಳಲ್ಲಿ ಸಹಕಾರಿಯಾಗಲು ಕರ್ನಾಟಕ ಭವನದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮಧ್ಯಾಹ್ನ 1:30ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಪುನೀತ್ ರಾಜ್‍ಕುಮಾರ್ ಪುತ್ರಿ ಹೊರಟಿದ್ದಾರೆ.
ಸಂಜೆ 4:15 ರ ಸುಮಾರಿಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.

ಇಂದಲ್ಲ , ನಾಳೆ ಅಪ್ಪು ಅಂತ್ಯಕ್ರಿಯೆ :

ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಅಪ್ಪು ಅಂತಿಮ ದಶ೯ನ ಮಾಡಿಕೊಡುವ ಕಾರಣಕ್ಕಾಗಿ ಇಂದು ಸಂಜೆಯ ಬದಲು ನಾಳೆ ಬೆಳಿಗ್ಗೆ ಅಂತ್ಯಕ್ರಿಯೆ ನಡೆಸಲು ನಿಧ೯ರಿಸಲಾಗಿದೆ.

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಸಿ ಎಂ ಬಸವರಾಜ್ ಬೊಮ್ಮಾಯಿ ರಾಜ್ ಕುಟುಂಬದ ಜೊತೆ ಚಚೆ೯ ಮಾಡಿ ಈ ನಿಧಾ೯ರ ಕೈಗೊಳ್ಳಲಾಗಿದೆ. ನಾಳೆಯ ಅಂತ್ಯಕ್ರಿಯೆ ಸಮಯವನ್ನು ಇಂದು ರಾತ್ರಿ ತೀಮಾ೯ನ ಮಾಡಲಾಗಿದೆ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!