ನೆರೆ ಪೀಡಿತ ಪ್ರದೇಶ: ರೋಗ ಹರಡದಂತೆ ಎಚ್ಚರಿಕೆಯ ಕ್ರಮ – ಸಚಿವ ಸುಧಾಕರ್

Team Newsnap
1 Min Read
sudhakar picture

ಪ್ರವಾಹದಿಂದ ತತ್ತರಗೊಂಡಿರುವ ಉತ್ತರ ಕರ್ನಾಟಕದ ಜಿಲ್ಲೆಗಳಾದ ಕೊಪ್ಪಳ, ವಿಜಾಪುರ, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಸಾಮನಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ.

ಎಲ್ಲ ಜಿಲ್ಲೆಗಳಿಗಿಂತಲೂ ಕಲಬುರ್ಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ಕಲಬುರ್ಗಿ ಜಿಲ್ಲೆಯ 155 ಗ್ರಾಮಗಳು ಜಲಾವೃತವಾಗಿವೆ. 55 ಗ್ರಾಮಗಳ ಜನರನ್ನು ಸೇರಿ, ಒಟ್ಟು 23,250 ಜನಗಳನ್ನು ಕಾಳಜಿ‌ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿನ 27 ಹಳ್ಳಿಗಳಗಳಲ್ಲಿ ಹಾನಿಯಾಗಿದೆ. 1,861 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ‌. ಬೇರೆ ಜಿಲ್ಲೆಗಳಲ್ಲಿ‌ ಕಾಳಜಿ ಕೇಂದ್ರಗಳನ್ನು ಸ್ಥಾಪಿಸುವ ಹಾನಿಯುಂಟಾಗಿಲ್ಲ.

ಕಾಳಜಿ‌ ಕೇಂದ್ರಗಳಲ್ಲಿನ ಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರು ಹಾಗೂ ಉತ್ತಮ‌ಆಹಾರ ಪೂರೈಸಲು ಸೂಚಿಸಲಾಗಿದೆ. ಒಂದು ವೇಳೆ ಕಾಳಜಿ‌ಕೇಂದ್ರದ ಹತ್ತಿರ ಶುದ್ಧ ಕುಡಿಯುವ ನೀರು ದೊರಕದಿದ್ದರೆ, ಸಿಗುವ ನೀರನ್ನು ಕಾಯಿಸಿ, ಶೋಧಿಸಿ ಸಂತ್ರಸ್ತರಿಗೆ ನೀಡಲು ಆರೋಗ್ಯಾಧಿಕಾರಿಗಳು ಸುಹಚನೆ ನೀಡಿದ್ದಾರೆ. ಡಲ್ಲ ಕಾಳಜಿ‌ ಕೇಂದ್ರಗಳ ಬಳಿ ದಿನವೂ ರೋಗ ನಾಶಕಗಳನ್ನು ಸಿಂಪಡಣೆ ಮಾಡಬೇಕು ಎಂದು ಹೇಳಿದ್ದಾರೆ.

ಕಳೆದ ಬಾರಿ ಇದ್ದಂತಹ ಪರಿಸ್ಥಿತಿ ಈ ಬಾರಿ ಇಲ್ಲ. ಡೆಂಗ್ಯೂ, ಚಿಕನ್‌ಗುನ್ಯ ರೋಗಗಳ ಹರಡುವಿಕೆ ಪ್ರಮಾಣ ಕಡಿಮೆ ಪ್ರಮಾಣದಲ್ಲಿದೆ. ಚಳಿಗಾಲದ ಜೊತೆ, ಹಬ್ಬದ ಪರ್ವವೂ ಇದಾಗಿರುವದರಿಂದ ಹೆಚ್ಚಿನ ಜಾಗೃತೆಯೊಂದಿಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸಚಿವರು ಆದೇಶ ನೀಡಿದ್ದಾರೆ.

ಕಾಳಜಿ ಕೇಂದ್ರಗಳಲ್ಲಿ ಹಿರಿಯ ನಾಗರೀಕರು, ಬಾಣಂತಿಯರು, ಗರ್ಭಿಣಿಯರು, ಇರುವದರಿಂದ ಅವರ ಆರೋಗ್ಯವನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕು ಅಥವಾ ಸಮೀಪದ ಆರೋಗ್ಯ ಕೇಂದ್ರಗಳಿಗೆ ಸೇರಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ. ಕಾಳಜಿ‌ ಕೇಂದ್ರದಲ್ಲಿರುವ ಎಲ್ಲರಿಗೂ ಕೋವಿಡ್‌ನ ಬಗ್ಗೆ ತಜ್ಞರಿಂದ ಅರಿವು ಮೂಡಿಸುವಂತೆ ಹೇಳಲಾಗಿದೆ.

Share This Article
Leave a comment