January 28, 2026

Newsnap Kannada

The World at your finger tips!

rape

ಬುದ್ಧಿಮಾಂದ್ಯ ಬಾಲಕಿಗೆ ಪಕ್ಕದ ಮನೆಯವನಿಂದಲೇ ಅತ್ಯಾಚಾರ – ಆರೋಪಿ ಪರಾರಿ

Spread the love

ಹಾಸನ: ಜಿಲ್ಲೆಯ ಹಳೆಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಮಾನವೀಯ ಘಟನೆ ನಡೆದಿದ್ದು, ಎರಡು ಮಕ್ಕಳ ತಂದೆಯೊಬ್ಬ ಬುದ್ಧಿಮಾಂದ್ಯ ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಬಾಲಕಿಯ ಪಕ್ಕದ ಮನೆಯವನೇ ಈ ಹೀನಕೃತ್ಯವೆಸಗಿದ್ದು, ಮಂಗಳವಾರ ಬಾಲಕಿಯ ಪೋಷಕರು ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ದುಷ್ಕೃತ್ಯ ನಡೆದಿದೆ. ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಆರೋಪಿ ಚಾಕೊಲೆಟ್ ಕೊಡುವ ನೆಪದಲ್ಲಿ ಆಕೆಯನ್ನು ಮೋಸಗೊಳಿಸಿ ಅತ್ಯಾಚಾರ ಎಸಗಿದ್ದಾನೆ.

ಸಂಜೆ ಪೋಷಕರು ಮನೆಗೆ ಬಂದಾಗ ಬಾಲಕಿಯ ವರ್ತನೆ ಸಂಪೂರ್ಣವಾಗಿ ಬದಲಾಗಿತ್ತು. ಆಕೆ ನಿರಂತರವಾಗಿ ಅಳಲು ಮುಂದಾದಾಗ, ತಕ್ಷಣವೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಅತ್ಯಾಚಾರವಾದುದು ದೃಢಪಟ್ಟಿದೆ.ಇದನ್ನು ಓದಿ –ವಾಹನ ಮಾಲೀಕರಿಗೆ ಸುವರ್ಣಾವಕಾಶ: ಕೇವಲ ₹3000 ಪಾವತಿಸಿದರೆ ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ

ಘಟನೆ ತಿಳಿಯುತ್ತಿದ್ದಂತೆ ಆರೋಪಿ ಮನೆಯ ಹಿಂಬಾಗಿಲಿಂದ ಪರಾರಿಯಾಗಿದ್ದು, ಈ ಬಗ್ಗೆ ಬಾಲಕಿಯ ಪೋಷಕರು ಹಳೆಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

error: Content is protected !!