ಕತ್ತಲೆಯ ಕೋಣೆಯದು ಆಕೆಯ ಕೈ ಕಾಲುಗಳನ್ನು ಕಬ್ಬಿಣದ ಸರಪಣಿಯಿಂದ ಬಿಗಿಯಲಾಗಿತ್ತು. ಆಹಾರ ಇಲ್ಲದ ದೇಹ ನಿಸ್ತ್ರಾಣ ಸ್ಥಿತಿಗೆ ತಲುಪಿತ್ತು. ಬಾಯಾರಿಕೆ ಅಂದಾಗಲೆಲ್ಲ ಉಪ್ಪು ನೀರನ್ನು ಕುಡಿಯಲು ಕೊಡಲಾಗುತ್ತಿತ್ತು. ಬ್ರಿಟಿಷ್ ಹವಾಲ್ದಾರ್ ನೊಬ್ಬ ಆ ಹೆಣ್ಣು ಮಗಳ ಮೇಲೆ ಮೃಗದಂತೆ ಎರಗಿ ಅತ್ಯಾಚಾರ ಮಾಡುವ ಯತ್ನ ಮಾಡತೊಡಗಿದ.ಆತನ ರಾಕ್ಷಿಸಿ ಹಲ್ಲುಗಳು ಅವಳ ತುಟಿಗಳನ್ನು ಛಿದ್ರ ಛಿದ್ರ ಮಾಡಿದವು, ಆತನ ಬಾಯಿಯಲ್ಲಿ ಆಕೆಯ ಬಲಗೈಯ ತುಂಡು ಮಾಂಸ ತೇತಾಡುತಿತ್ತು.ಆಗಲೂ ಆ ವೀರವನಿತೆಯ ಬಾಯಿಂದ ಮೊಳಗುತಿದ್ದದ್ದು ಮಾತ್ರ ತಾಯಿ ಭಾರತಿಯ ಘೋಷಣೆ…..
ಭಾರತ್ ಮಾತಾ ಕೀ ಜೈ.
ವಂದೇ ಮಾತರಂ..!
“ಏ ದೂರ್ತ,ನೀನು ಮುಟ್ಟಿರುವುದು ಭಾರತಾಂಬೆಯ ಮಗಳನ್ನು,ಬೆಂಕಿಯನ್ನು ಅವರಿಸಲು ಬಂದ ನೀನು ಸುಟ್ಟು ಬೂದಿಯಾಗದೇ ಇರಲಾರೆ…”ಆತ್ಮಾಭಿಮಾನಕ್ಕೆ ದಕ್ಕೆಯಾದಾಗ ಅಂತಹ ಸಂಕಟದ ಸಮಯದಲ್ಲೂ ಸಿಂಹಿಣಿಯಂತೆ ಘರ್ಜಿಸಿದ್ದಳು ಆರ್ಯ.ಸೆರೆಮನೆಯ ಅಧಿಕಾರಿ ಕಡಕ್ ದ್ವನಿಯಲ್ಲಿ “ನೇತಾಜಿ ಸುಭಾಸ್ ಚಂದ್ರ ಬೋಸ್ ಎಲ್ಲಿದ್ದಾರೆ ಎಂದು ಹೇಳು ನಿನ್ನ ಬಿಡುಗಡೆ ಮಾಡುತ್ತೇವೆ”ಎಂದಾಗ ನೀರಾ ಹೇಳುತ್ತಾರೆ”ನೇತಾಜಿ ವರನ್ನು ಹುಡುಕಲು ನಿಮ್ಮಿಂದ ಸಾಧ್ಯವಿಲ್ಲ,ಅವರು ಭಾರತೀಯರಾದ ನಮ್ಮ ಹೃದಯದಲ್ಲಿದ್ದಾರೆ ಮತ್ತು ಅಲ್ಲಿಯೇ ಶಾಶ್ವತವಾಗಿರುತ್ತಾರೆ..”ಎಂದು ಅಭಿಮಾನದಿಂದ ಉತ್ತರಿಸಿದಾಗ ಜೈಲರ್ ನ ಮುಖ ಕೋಪದಿಂದ ಕುದಿಯತೊಡಗಿತು. ಹೌದ ಹಾಗದರೆ ನಿನ್ನ ನೇತಾಜಿಯನ್ನು ಮೊದಲು ನಿನ್ನ ಎದೆಯಿಂದ ತೆಗೆಯುತ್ತೇನೆ ಎನ್ನುತ್ತಾ ಅವಳೊಬ್ಬಳು ಹೆಣ್ಣು ಎನ್ನುವುದನ್ನು ಸಹ ಯೋಚಿಸದೆ ಅವಳೆದೆಗೆ ಕೈ ಹಾಕಿ ಕುಪ್ಪಸವನ್ನು ಹರಿದು ಸಹಾಯಕನಿಗೆ ಸನ್ನೆ ಮಾಡಿದನು.ಆತ ತಂದ ಚೂಪಾದ ಇಕ್ಕಳದಂತಹ ಆಯುಧದಿಂದ ಆಕೆಯ ಬಲಸ್ತನವನ್ನು ಕತ್ತರಿಸಿಯೇ ಬಿಟ್ಟ.ಅಲ್ಲಿ ರಕ್ತದ ಓಕುಳಿಯೇ ಹರಿಯಿತು.ಕುತ್ತಿಗೆ ಕತ್ತರಿಸಿದ ಕೋಳಿಯಂತೆ ವಿಲವಿಲನೆ ಒದ್ದಾಡತೊಡಗಿದ ನೀರಾಳ ತಲೆಯನ್ನು ಜೇಲರ್ ತನ್ನ ಬೂಟುಗಾಲಿನಿಂದ ಒತ್ತಿ ಹಿಡಿದಿದ್ದ.
ಅವಳ ಆಕ್ರಂದನಕ್ಕೆ ಬಾಗಿಲಿನ ಕಬ್ಬಿಣದ ಸರಳುಗಳು ಸಹ ನಡುಗತೊಡಗಿದವು. ಅಂತಹ ಬಿಬತ್ಸತೆ ಅಲ್ಲಿ ನಡೆದು ಹೋಯಿತು. ಆಗಲೂ ಆ ಧೀರೆಯ ಒಡಲಾಳದಿಂದ ಹೊಮ್ಮುತಿದ್ದದ್ದು…..
ಭಾರತ್ ಮಾತಾ ಕೀ ಜೈ
ವಂದೇ ಮಾತರಂ…!
ಪ್ರೀತಿಸಿ ಮದುವೆಯಾದ ಪತಿ ಶ್ರೀಕಾಂತ್ ಜಯರಂಜನ್ ದಾಸ್ ಬ್ರಿಟಿಷ್ ಆಡಳಿತದಲ್ಲಿ ಸಿಐಡಿ ಅಧಿಕಾರಿಯಾಗಿದ್ದ. ಆತ ನೇತಾಜಿಯವರನ್ನು ಕೊಲ್ಲಲು ನಿತ್ಯ ನಿರಂತರ ಹೊಂಚು ಹಾಕಿ ಕುಳಿತಿದ್ದ. ಒಮ್ಮೆ ನೇತಾಜಿಯವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಶ್ರೀಕಾಂತ್ ಅವರ ಮೇಲೆ ಗುಂಡು ಹಾರಿಸತೊಡಗಿದ.ಆದರೆ ಅದು ಸುಭಾಷರಿಗೆ ತಗುಲದೆ ಅವರ ಕಾರು ಚಾಲಕನಿಗೆ ತಗುಲಿತು.
ತನ್ನ ಬದುಕೆಂದು ತಿಳಿದು ಸಪ್ತಪದಿ ತುಳಿದಿದ್ದ ಬಾಳಸಂಗಾತಿ ಭಾರತದ ವಿದ್ರೋಹಿ ಎಂದು ಅರಿವಾದಾಗ ನೀರಾಳ ಕಣ್ಣುಗಳ ತುಂಬ ಆಕ್ರೋಶದ ಕಣ್ಣೀರು ಒತ್ತರಿಸಿ ಬರತೊಡಗಿತು. ಪತಿಯೊಡನೆ ವಾದಕ್ಕಿಳಿದಳು, ವಿನಂತಿಸಿದಳು, ಅಂಗಲಾಚಿದಳು.”‘ಜನನಿ ಜನ್ಮಭೂಮಿಷ್ಟ ಸ್ವರ್ಗಾದಪಿ ಗರೀಯಸಿ”‘ ಎಲ್ಲವನ್ನೂ ವಿಧವಿಧವಾಗಿ ವಿವರಿಸಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಶ್ರೀಕಾಂತ್ ಇರಲಿಲ್ಲ. ‘ನಿಮ್ಮದು ಹುಚ್ಚರ ದೇಶ,ಇಂತಹ ಮೂರ್ಖರ ನೇತೃತ್ವ ವಹಿಸಿಕೊಂಡಿರುವ ನೇತಾಜಿಯನ್ನು ಕೊಲ್ಲದೆ ಬಿಡಲಾರೆ’ ಎಂದು ಬಿಟ್ಟ.
ಯಾವಾಗ ತಾಯಿ ಭಾರತೀಯನ್ನು ಅವಹೇಳನವಾಗಿ ಮಾತನಾಡಿದನೋ ಆಕೆಯಿಂದ ಸಹಿಸಿಕೊಳ್ಳಲು ಆಗಲಿಲ್ಲ.
ಕ್ಷಣಮಾತ್ರವೂ ಯೋಚಿಸದೆ ಪಕ್ಕದಲ್ಲೇ ಇದ್ದ ಚಾಕುವಿನಿಂದ ಗಂಡ ಶ್ರೀಕಾಂತ್ ಜಯರಂಜನ್ ದಾಸನನ್ನು ಇರಿದು ಕೊಂದಳು.ಅಂತಹ ವೇಳೆಯಲ್ಲೂ ಆ ದೇಶಭಕ್ತೆಯ ಬಾಯಿಂದ ಝೇಂಕರಿಸಿದ್ದು,…….
ಭಾರತ್ ಮಾತಾ ಕೀ ಜೈ.
ವಂದೇ ಮಾತರಂ..!
ಗಂಡನನ್ನು ಕೊಂದ ಆರೋಪದಡಿಯಲ್ಲಿ ನೀರಾ ಆರ್ಯಳನ್ನು ಬಂದಿಸಿ ಕರಿನೀರ ಶಿಕ್ಷೆಗೆ ಈಡು ಮಾಡಲಾಯಿತು.ಚಿತ್ರವಿಚಿತ್ರ ಚಿತ್ರಹಿಂಸೆಗಳನ್ನು ಕೊಡಲಾಯಿತು.ಜೈಲು ಉಸ್ತುವಾರಿಗಳು ನೀರಾಳ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿದರು. ಏನೇ ಮಾಡಿದರೂ ನೀರಾ ಮಾತ್ರ ತಾಯಿ ಭಾರತೀಯ ಮಡಿಲು ಬಿಟ್ಟು ಹೊರ ಬರಲೇ ಇಲ್ಲ.
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಒಂದು ವರ್ಷದ ಮೊದಲು ನೀರಾ ಆರ್ಯ ತನ್ನ ಅಣ್ಣ ಬಸಂತ ಕುಮಾರ್ ನೊಂದಿಗೆ ಜೈಲಿನಿಂದ ಆದಳು. ಸ್ವಾತಂತ್ರ್ಯ ಸಿಕ್ಕ ನಂತರ ಸಹೋದರ ಸನ್ಯಾಸಿಯಾಗಿ ಹಿಮಾಲಯದ ಕಡೆಗೆ ಹೊರಟು ಹೋದರು.
ಇನ್ನು ದೇಶದ ಬಂಧಮುಕ್ತಿಗಾಗಿ ಎಲ್ಲವನ್ನೂ ಅನುಭವಿಸಿದ ಈ ವೀರ ಮಹಿಳೆಯ ಕೊನೆಯ ದಿನಗಳು ಅತ್ಯಂತ ಯಾತನಾಮಯವಾಗಿತ್ತು. ಆಕೆಯದು ಶ್ರೀಮಂತ ಕುಟುಂಬವಾಗಿದ್ದರೂ ಅಲ್ಲಿ ಅವಳಿಗೆ ನೆಲೆ ಸಿಗಲಿಲ್ಲ.ಶತಶತಮಾನದ ಪರದಾಸ್ಯದ ಕಾಯಿಲೆಗೆ ದಿವ್ಯೌಷಧ ನೀಡಿದ ಡಾಕ್ಟರ್ ಹೆಡಗೇವಾರ್..
ತನ್ನ ಸಂಪೂರ್ಣ ಬದುಕನ್ನೇ ರಾಷ್ಟ್ರಕ್ಕಾಗಿ ಅರ್ಪಿಸಿದ ಈ ಧೀರೋದ್ದಾತೆಗೆ ಆಗಿನ ನೆಹರು ನೇತೃತ್ವದ ಭಾರತ ಸರ್ಕಾರ ಯಾವುದೇ ಸರಕಾರಿ ಸೌಲಭ್ಯ ಅಥವಾ ಪಿಂಚಣಿಯನ್ನು ನೀಡಿಲ್ಲ. ಪಾಳು ಬಿದ್ದ ಗುಡಿಸಲೊಂದರಲ್ಲಿ ವಾಸ ಮಾಡತೊಡಗಿದ ನೀರಾ ಹೊಟ್ಟೆ ಪಾಡಿಗಾಗಿ ಕಲ್ಕತ್ತಾದ ರಸ್ತೆಗಳಲ್ಲಿ ಹೂ ಮಾರತೊಡಗಿದಳು. ದಣಿದ ದೇಹ, ಅವಮಾನಗೊಂಡ ಮನಸು, ಅಸ್ಪಷ್ಟ ದಾರಿ ಅಂತಹ ಹೊತ್ತಲ್ಲಿ ಆಕೆ ವಿಶ್ರಾಂತಿಗಾಗಿ ತಂಗುತ್ತಿದ್ದ ಗುಡಿಸಲು ಸರ್ಕಾರಿ ಜಾಗದಲ್ಲಿದೆ ಎನ್ನುವ ಕಾರಣಕ್ಕೆ ಅದನ್ನು ನೆಲಸಮ ಗೊಳಿಸಲಾಯಿತು. ಅಕ್ಷರಶಃ ನೀರಾ ಆರ್ಯಳ ಬದುಕೀಗ ಬೀದಿಗೆ ಬಿತ್ತು. ಒಂದಿನ ಅದು ಯಾವುದೋ ದಾರಿಯ ನಿರ್ಜನ ತಿರುವಿನಲ್ಲಿ ಅವಳ ಅನಾಥ ಶವ ಅಂಗಾತ ಮಲಗಿತ್ತು.ಅವಳಿಗಾಗಿ ಅಳುವವರು ಅಲ್ಲಿ ಯಾರೂ ಇರಲಿಲ್ಲ. ಆದರೆ ತಾಯಿ ಭಾರತೀಯ ಕಣ್ಣುಗಳಲ್ಲಿ ಸೂತಕದ ಕಣ್ಣೀರು ಧಾರೆಯಾಗಿ ಹರಿಯುತಿತ್ತು ಬರೆದು ಮುಗಿಸಿದಾಗ ನನ್ನ ಕಣ್ಣಲ್ಲೂ ನೀರಿತ್ತು. ನೀರಾ ಆರ್ಯಾಳ ಬದುಕನ್ನು ನೀವು ಓದಿದರೆ ಭಾವಗದ್ಗದಿತರಾಗದೆ ಇರಲಾರಿರಿ..
ಬನ್ನಿ ಒಟ್ಟಾಗಿ ಒಂದಾಗಿ ಹೇಳೋಣ
ಭಾರತ್ ಮಾತಾ ಕೀ ಜೈ
ವಂದೇ ಮಾತರಂ 🚩
✍🏻ಉದಯ್ ಕುಂದಾಪುರ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ