ನಾಳೆಯಿಂದ 10 ದಿನಗಳ ಕಾಲ ಸರ್ಕಾರದ ಆದೇಶದ ಪ್ರಕಾರ ರಾತ್ರಿ ಕರ್ಫ್ಯೂ ಜಾರಿಯಾಗುತ್ತದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5
ಗಂಟೆಯವರೆಗೆ ನೈಟ್ ಕರ್ಫ್ಯೂ ಇರುತ್ತೆ. ಆದರೆ ಈ ಸಮಯದಲ್ಲಿ ಓಡಾಟ ನಡೆಸಲು ಯಾವುದೇ ಪಾಸ್ ನೀಡೋದಿಲ್ಲ.
ಇಂತಹ ಖಡಕ್ ಸಂದೇಶ ನೀಡಿದವರು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪಂತ್ ನೈಟ್ ಕರ್ಪ್ಯೂ ಸರ್ಕಾರದ ಆದೇಶದ ಪ್ರಕಾರ ಇರುತ್ತೆ. ಯಾರು ಹೊರಗಡೆ ಓಡಾಡೋಕೆ ಬಿಡಲ್ಲ. ಆದರೆ ಸರ್ಕಾರ ಆದೇಶದಲ್ಲಿ ವಿನಾಯಿತಿ ನೀಡಿರುವವರಿಗೆ ಓಡಾಟ ಮಾಡಲು ಅವಕಾಶವಿರುತ್ತೆ ಎಂದರು
ಬಸ್, ಕ್ಯಾಬ್ ಸೇವೆಯೂ ಇರುತ್ತೆ. ಆದರೆ ಎಲ್ಲಾ ಭಾಗದಲ್ಲೂ ನಾಕಾಬಂದಿ ಮಾಡಿ ಬಂದ್ ಮಾಡ್ತೀವಿ. ನಮ್ಮ ಪ್ಯಾಟ್ರೋಲಿಂಗ್ ಇರುತ್ತೆ. ನಿಯಮಗಳನ್ನು ಉಲ್ಲಂಘನೆ ಮಾಡುವವ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಕೇಸ್ ಮಾಡಲಾಗುವುದು ಎಂದು ಹೇಳಿದರು.
ಅಸ್ಪತ್ರೆ ಹೋಗುವವರು ದಾಖಲೆ ತೋರಿಸಿ ಹೋಗಬಹುದು. ಟಿಕೆಟ್ ತೋರಿಸಿ ಪ್ರಯಾಣಿಕರು ಟ್ರಾವೆಲ್ ಮಾಡಬಹುದು. ಯಾವುದೇ ಪಾಸ್ ಕೊಡಲ್ಲ ಎಂದು ಮಾಹಿತಿ ನೀಡಿದರು.
ಉಳಿದಂತೆ ಹೊಸ ವರ್ಷದ ದಿನವೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ತೀವಿ. ಇಂದಿರಾನಗರ, ಕೋರಮಂಗಲ, ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನ ಓಡಾಡೋಕೆ ಬಿಡಲ್ಲ. ಅಂದು ಪಬ್, ಬಾರ್ ರೆಸ್ಟೋರೆಂಟ್ ಹತ್ತು ಗಂಟೆಗೆ ಕ್ಲೋಸ್ ಮಾಡಬೇಕು. ಎಮರ್ಜೆನ್ಸಿ ಕೆಲಸ ಇರುವವರು ಬಿಟ್ಟರೇ ಬೇರೆ ಯಾರು ಹೊರ ಬರೋದಕ್ಕೆ ಬಿಡಲ್ಲ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ