January 11, 2025

Newsnap Kannada

The World at your finger tips!

nanatara

ನಟ ಕಮಲ್ ಜೊತೆ ನಟಿಸಲು ಆಫರ್ ರಿಜಕ್ಟ್ ಮಾಡಿದ ನಯನಾ ತಾರ !

Spread the love

ಖ್ಯಾತ ನಟ ಕಮಲ್ ಹಾಸನ್ ಜೊತೆ ನಟಿಸುವ ಅವಕಾಶ ಸಿಕ್ಕರೆ ಸಾಕು ನಟಿಮಣಿಯರು ಆ್ಯಕ್ಟ್ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ.

ಆದರೆ ಸುಂದರಿ ನಯನಾ ತಾರಾ ಮಾತ್ರ ನಾನು ಕಮಲ್ ಜೊತೆ ನಟಿಸುವುದಿಲ್ಲ ಎಂದು ಆಫರ್ ತಳ್ಳಿ ಹಾಕಿದ ಸಂಗತಿ ಈಗ ಬೆಳಕಿಗೆ ಬಂದಿದೆ.

ಯಾಕೆ ಅಂತ ಕಾರಣ ಕೆದುಕುತ್ತಾ ಹೋದರೆ ಒಂದು ಸಂಗತಿ ಬಯಲಾಯಿತು.

ನಟಿ ನಯನತಾರಾ ಕಮಲ್ ಹಾಸನ್ ಜೊತೆ ನಟಿಸುವ ಅವಕಾಶವನ್ನು ಹಲವು ಬಾರಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಕಮಲ್ ಹಾಸನ್ ಜೊತೆ ಅನ್ಯೋನ್ಯತೆ ಹಾಗೂ ಚುಂಬನ ದೃಶ್ಯಗಳಲ್ಲಿ ನಟಿಸುವುದನ್ನು ತಪ್ಪಿಸಲು ಈ ರೀತಿ ಮಾಡಿದ್ದಾರೆ ಎನ್ನುವ ಕಾರಣ ಪರೋಕ್ಷವಾಗಿ ಬೆಳಕಿಗೆ ಬಂದಿದೆ.

ನಟಿ ನಯನತಾರಾ ತಮಿಳು, ತೆಲುಗು ಮತ್ತು ಮಲಯಾಳಂನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಅವರ ನೇಟ್ರಿಕನ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇದೀಗ ಅವರು ಶ್ಯಾಡೋ ಮತ್ತು ಗಾರ್ಡಿಯನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!