January 7, 2025

Newsnap Kannada

The World at your finger tips!

bollywood,jail,arrest

Navjot Singh Sidhu started working as a clerk for 90rs in jail

ಜೈಲಿನಲ್ಲೇ 90 ರುಗೆ ದಿನಗೂಲಿ ಗುಮಾಸ್ತನ ಕೆಲಸ ಆರಂಭಿಸಿದ ನವಜೋತ್ ಸಿಂಗ್ ಸಿಧು

Spread the love

ಒಂದು ವರ್ಷ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿ ಗುಮಾಸ್ತನ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 90 ರು ದಿನಗೂಲಿ ನಿಗದಿ ಮಾಡಲಾಗಿದೆ.

ಇದನ್ನು ಓದಿ –ಹುಚ್ಚು ಮುಂಡೇದು ಪ್ರತಾಪ್‌ ಸಿಂಹಗೆ ಏನೂ ಗೊತ್ತಿಲ್ಲ: ಸಿಎಂ ಇಬ್ರಾಹಿಂ ಲೇವಡಿ

34 ವರ್ಷಗಳ ಹಿಂದೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 1 ವರ್ಷ ಕಠಿಣ ಶಿಕ್ಷೆ ವಿಧಿಸಿದೆ

ಈ ಸಜೆಗೆ ಗುರಿಯಾಗಿರುವ ಸಿಧು ಅವರನ್ನು ಪಟಿಯಾಲಾ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ 10 ರಲ್ಲಿ ಇರಿಸಲಾಗಿದೆ. 

ಈಗ ಅವರನ್ನು 90 ರೂಪಾಯಿ ದಿನಗೂಲಿಗೆ ಗುಮಾಸ್ತನ ಕೆಲಸಕ್ಕೆ ನೇಮಿಸಲಾಗಿದೆ. ಮೊದಲ 3 ತಿಂಗಳು ಕೂಲಿ ನೀಡದೇ ತರಬೇತಿ ನೀಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಅವರು ದುಡಿದ ಒಟ್ಟು ಹಣವು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸದ ಸಮಯ :

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಸಿಧು ಕೆಲಸ ಮಾಡುತ್ತಾರೆ. ಇದರ ನಡುವೆ 2 ಗಂಟೆಗಳ ಕಾಲ ವಿರಾಮ ನೀಡಲಾಗುತ್ತದೆ. ಅವರ ಕೊಠಡಿ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!