March 5, 2025

Newsnap Kannada

The World at your finger tips!

ajwain

ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ

Spread the love

ಇಂದಿನ ಒತ್ತಡದ ಬದುಕಿನಲ್ಲಿ ಜನರು ತಾವೇ ಅಡುಗೆ ಮಾಡಿ ತಿನ್ನಲು ಸಮಯವಿಲ್ಲದ ಕಾರಣ ಹೊರಗಡೆ ಅಥವಾ ಹೋಟೆಲ್ ಗಳಲ್ಲಿ, ರಸ್ತೆ ಬದಿಗಳಲ್ಲಿ ಸಿಗುವಂತಹ ಮತ್ತೆ ಬೇಕರಿ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ತಿನ್ನುತ್ತಾರೆ ಆದರೆ ಇವುಗಳು ಅವರ ಬಾಯಿಗೆ ರುಚಿಯನ್ನು ನೀಡುತ್ತವೆಯಾದರೂ ಆರೋಗ್ಯ ಹಾಳಾಗುತ್ತದೆ ಏಕೆಂದರೆ ಹೋಟೆಲ್ ಗಳಲ್ಲಿ ಹೆಚ್ಚಾಗಿ ತಿನಿಸುಗಳಲ್ಲಿ ಸೋಡ ಬಳಸುತ್ತಾರೆ.

ಈ ಸೋಡಾವನ್ನು ಅಡುಗೆಯಲ್ಲಿ ಬಳಸುವುದರಿಂದ ಊಟ ಮಾಡುವಾಗ ಜನರಿಗೆ ಊಟ ಹೆಚ್ಚಾಗಿ ಸೇರುವುದಿಲ್ಲ ಸ್ವಲ್ಪವೇ ಊಟ ತಿಂದ ತಕ್ಷಣ ಹೊಟ್ಟೆ ತುಂಬಿ ದಂತಾಗುತ್ತದೆ ಏಕೆಂದರೆ ಇದಕ್ಕೆ ಕಾರಣ ಅಡುಗೆಯಲ್ಲಿ ಬಳಸಿದ ಅಡುಗೆ ಸೋಡಾ ಇಂತಹ ಅಡುಗೆ ತಿನ್ನುವುದರಿಂದ ಗ್ಯಾಸ್ಟ್ರಿಕ್ ಎದೆಯೂರಿಯಂತಹ ಸಮಸ್ಯೆಗಳು ಎದುರಾಗುತ್ತವೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾವು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ ಏಕೆಂದರೆ ಅದಕ್ಕೆ ನಾವೇ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಿಕೊಳ್ಳಬಹುದು.

ನೆಲದ ಮೇಲೆ ಚೆಲ್ಲಿದರೆ ತಕ್ಷಣ ಕಣ್ಣಿಗೆ ಕಾಣದಷ್ಟು ಚಿಕ್ಕ ಗಾತ್ರದ ಆದರೆ ದೈತ್ಯಾಕಾರದ್ದಷ್ಟು ಅಪಾರವಾದ ಔಷಧೀಯ ಗುಣಗಳನ್ನು ಹೊಂದಿರುವ ಈ ಮಸಾಲೆ ಕಾಳುಗಳಿಗೆ ಕನ್ನಡ ಭಾಷೆಯಲ್ಲಿ ಓಮು ಕಾಳು, ಅಜಮೋದ, ಅಜಮೂಲ, ಅಜವಾನ ಎಂದು ಕರೆಯುತ್ತಾರೆ. ಇನ್ನು, ಸಂಸ್ಕೃತ ಭಾಷೆಯಲ್ಲಿ ಯವನಿ ಅಥವಾ ಉಗ್ರಗಂಧ ಎಂದು ಕರೆಯುಲ್ಪಡುವ ಅಜಮೋದಿಕಾ ಎಂದೂ ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಅಜವಾಯಿನ್ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ Ajowan, Ajwain ಎನ್ನುತ್ತಾರೆ. ವಿಶಿಷ್ಟವಾದ ಪರಿಮಳ, ಅಲ್ಪ ಖಾರದ ರುಚಿ ಇರುವ ಈ ಓಮು ಕಾಳು ಎಲ್ಲರಿಗೂ ಪರಿಚಿತ.

ಪ್ರಾಚೀನ ಕಾಲದಿಂದಲೂ ಮನೆ ಮದ್ದಾಗಿ ಬಳಕೆಯಲ್ಲಿರುವ ಅಜವಾನ ಅನುಪಮ ಔಷಧೀಯ ಗುಣಗಳನ್ನು ಹೊಂದಿದೆ. ಓಂಕಾಳನ್ನು ಹೀಗೆ ಬಳಸುವುದರಿಂದ ಯಾವ ಯಾವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುವುದನ್ನು ಈ ಒಂದು ಚಿಕ್ಕ ಲೇಖನದಲ್ಲಿ ತಿಳಿಯೋಣವೇ…

  • ಜೀರ್ಣಕ್ರಿಯೆಗೆ ಅಜ್ವೈನ ಬಹಳ ಒಳ್ಳೆಯದು. ಅಧ್ಯಯನದ ಪ್ರಕಾರ, ಅಜ್ವೈನ್ ಗ್ಯಾಸ್ಟ್ರಿಕ್ (Gastric) ಆಮ್ಲ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಹೊಟ್ಟೆಯಲ್ಲಿರುವ ಸೋಂಕು (Infection ) ನಿವಾರಣೆಗೆ ಓಂಕಾಳು ರಾಮಬಾಣವಾಗಿ ಕೆಲಸಮಾಡುತ್ತದೆ.
  • ಅಜ್ವೈನ ನೀರು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ದೇಹದಿಂದ ಹೊರಗೆ ಹಾಕುತ್ತದೆ.ಅಧ್ಯಯನದಲ್ಲಿ ಓಂಕಾಳಿನ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್ ಮತ್ತು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಪತ್ತೆಯಾಗಿದೆ. ಓಂಕಾಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಮಾತ್ರವಲ್ಲ ಹೃದಯಕ್ಕೆ ಪ್ರಯೋಜನಕಾರಿಯಾದ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಲು ನೆರವಾಗುತ್ತದೆ.
  • ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ರಕ್ತದೊತ್ತಡ ಕೂಡ ಒಂದು. ರಕ್ತದೊತ್ತಡದಿಂದ ಹೃದಯಾಘಾತವಾಗುವ ಸಾಧ್ಯತೆಯಿರುತ್ತದೆ. ಓಂಕಾಳಿನ ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಓಂಕಾಳು ಸೇವನೆಯಿಂದ ಕ್ಯಾಲ್ಸಿಯಂ ಹೃದಯಕ್ಕೆ ಹೋಗುವುದನ್ನು ತಡೆಯುತ್ತದೆ. ರಕ್ತನಾಳಗಳನ್ನು ವಿಸ್ತರಿಸುವ ಕೆಲಸ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
  • ಓಂ ಕಾಳು ಶ್ವಾಸಕೋಶಗಳನ್ನು ಉತ್ತಮವಾಗಿಡುತ್ತದೆ. ಕೆಮ್ಮು ಮತ್ತು ಕಫವನ್ನು ತಡೆಗಟ್ಟುವಲ್ಲಿ ಇದು ಪರಿಣಾಮಕಾರಿ. ಅಜ್ವೈನ ಸೇವನೆ ಮಾಡುವುದ್ರಿಂದ ಅಸ್ತಮ ಸಮಸ್ಯೆ ಕಡಿಮೆಯಾಗುತ್ತದೆ.
  • ಖಾಲಿ ಹೊಟ್ಟೆಯಲ್ಲಿ ಅಜವೈನ್ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಕೊಬ್ಬು ಕಡಿಮೆಯಾಗುತ್ತದೆ. ತೂಕವನ್ನು ನಿಯಂತ್ರಣದಲ್ಲಿ ಇಡಲು ಅಜ್ವೈನ ನೀರು ಬಹಳ ಉಪಯೋಗಕಾರಿ.
  • ಹೊಟ್ಟೆಯಲ್ಲಿ ಯಾವುದೇ ಸಮಸ್ಯೆಯಾದ್ರೂ ಅದಕ್ಕೆ ಓಂಕಾಳು ಬಹಳ ಒಳ್ಳೆಯದು. ಫುಡ್ ಪಾಯಿಸನ್, ವಾಂತಿ, ವಾಕರಿಕೆ ಸಮಸ್ಯೆ ಕಾಡುತ್ತಿದ್ದಾಗ ಓಂಕಾಳಿನ ನೀರು ಬಹಳ ಒಳ್ಳೆಯದು.
  • ನವಜಾತ ಶಿಶು ಹೆಚ್ಚು ಅಳುತ್ತಿದ್ದರೆ ಮನೆಯ ಹಿರಿಯರು ಅಜವಾನ ತಿಂದು ಮಗುವಿನ ಮುಖಕ್ಕೆ ಊದಲು ಹೇಳುತ್ತಾರೆ. ಏಕೆಂದರೆ ತಾಯಿಯಾದವಳು ಅಜವಾನ ತಿಂದು ಮಗುವಿನ ಮುಖಕ್ಕೆ ಊದುವ ಮಾತ್ರದಿಂದ ಇದರ ವಿಶಿಷ್ಟ ಪರಿಮಳ ಮಗುವಿನ ಶ್ವಾಸದೊಂದಿಗೆ ಹೊಟ್ಟೆಗೆ ಸೇರಿ, ಮಗುವಿನ ಹೊಟ್ಟೆ ಯುಬ್ಬರ ಕಡಿಮೆಯಾಗಿ ಮಗುವಿಗೆ ಆರಾಮ ವೆನಿಸುತ್ತದೆ.
  • ಚಿಕ್ಕ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದರೆ ಅಜವಾನ ಹಾಗೂ ಕರಿ ಎಳ್ಳು ಬೆಲ್ಲ ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ( ದಿನದಲ್ಲಿ ಎರಡು) ತಿನ್ನಿಸುವುದರಿಂದ ಗುಣಕಾಣಬಹುದು.
  • ಕಫ ಕೆಮ್ಮುಗಳಿಗೆ ಎದೆಯ ಮೇಲೆ ಸಾಸಿವೆ ಎಣ್ಣೆ ಯನ್ನು ಸವರಿ, ಒಂದು ಬಟ್ಟೆಯಲ್ಲಿ ಓಮು ಕಾಳು ಸ್ವಲ್ಪ ಪಚ್ಚ ಕರ್ಪುರ ಹಾಕಿ ಚೂರು ಬಿಸಿ ಮಾಡಿ ಎದೆಯ ಮೇಲೆ ಸವರಿ ವಾಸನೆ ತೆಗೆದುಕೊಳ್ಳುವುದರಿಂದ ಮೇಲೆನಿಸುವುದು.
  • ಪ್ರಸವದ ನಂತರ ಬಾಣಂತಿಯರಿಗೆ ಅಜವಾನ ತಿನ್ನಲು ಕೊಡುತ್ತಾರೆ. ಅಥವಾ ಕಷಾಯ ಮಾಡಿಕೊಡುವುದರಿಂದ ಹಸಿವು ಹೆಚ್ಚಾಗಿ,ಉಂಡ ಆಹಾರ ಜೀರ್ಣವಾಗುತ್ತದೆ.ಇದು ಕ್ರಿಮಿನಾಶಕ ಗುಣ ಹೊಂದಿದ್ದು ಗರ್ಭಾಶಯ ಕೂಡ ಸ್ವಚ್ಛವಾಗುತ್ತದೆಯೆಂದು ಹೇಳುತ್ತಾರೆ.
  • ಓಮು ಕಾಳು ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳುವುದನ್ನು ತಡೆಯುವಲ್ಲಿ ಪರಿಣಾಮಕಾರಿ. ಇದರ ಸೇವನೆಯಿಂದ ಲಿವರ್ ಮತ್ತು ಕಿಡ್ನಿ ಸುಲಭವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
  • ಗರ್ಭಾವಸ್ಥೆ ಸಮಯದಲ್ಲಿ ಓಮು ಕಾಳಿನ ಸೇವನೆ ರಕ್ತಶುದ್ಧೀಕರಣಗೊಳಿಸಿ,
    ದೇಹದಲ್ಲಿ ರಕ್ತ ಸಂಚಲನ ಹೆಚ್ಚಿಸುತ್ತದೆ.
  • ಥಂಡಿ ಅಥವಾ ಚಳಿ oವಾತಾವರಣವಿದ್ದಾಗ, ಈ ಕಾಳನ್ನು ತಿಂದರೆ ಕೆಮ್ಮು ಮತ್ತು ನೆಗಡಿ ಉಪಶಮನವಾಗುತ್ತದೆ. ಓಮನ್ನು ಅಗಿದು ಬಿಸಿ ನೀರಿನೊಂದಿಗೆ ನುಂಗಬೇಕು. ಇದು ಅಸ್ತಮಾ ಖಾಯಿಲೆಗೂ ಸೂಕ್ತ. ಬೆಲ್ಲದೊಂದಿಗೆ ಓಮು ಕಾಳನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.
  • ಸ್ವಲ್ಪ ಪ್ರಮಾಣದ ಓಂ ಕಾಳುಗಳನ್ನು ನೇರವಾಗಿ ಅಥವಾ ಊಟದ ನಂತರ ಮೌತ್ ಫ್ರೆಶ್ನರ್ ಮಿಶ್ರಣದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಉಸಿರಾಟಕ್ಕೆ ಸಹಾಯ ಮಾಡುತ್ತದೆ.

ಇದನ್ನು ಓದಿ –ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ನಮ್ಮ ಆಹಾರದಲ್ಲಿ ಓಂ ಕಾಳುಗಳನ್ನು ಸೇರಿಸುವುದು ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸಲು ಸುವಾಸನೆಯ ಮತ್ತು ನೈಸರ್ಗಿಕ ಮಾರ್ಗವಾಗಿದೆ. ಓಂ ಕಾಳುಗಳನ್ನು ಸಾಮಾನ್ಯವಾಗಿ ಬಳಕೆಗೆ ಸುರಕ್ಷಿತವಾಗಿದ್ದರೂ, ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತವಾದುದು.

sowmya sanath

ಸೌಮ್ಯ ಸನತ್ ✍️.

Copyright © All rights reserved Newsnap | Newsever by AF themes.
error: Content is protected !!