ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಬಹು ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ನನ್ನನ್ನು ಹನಿ ಟ್ರ್ಯಾಪ್‌ಗೆ ಬಳಿಸಿಕೊಂಡು ಈ ರೀತಿಯ ಕೃತ್ಯ ಎಸಗಿದ್ದಾರೆ. ಕಿಂಗ್ ಪಿನ್ಸ್ ನರೇಶ್, ಶ್ರವಣ್ ವಿರುದ್ಧ ಸಿಡಿ ಲೇಡಿ ಸ್ಫೋಟಕ ಆರೋಪ ಮಾಡಿದ್ದಾಳೆ.
ಎಸ್‌ಐಟಿ ತನಿಖಾಧಿಕಾರಿ ಕವಿತಾ ಮುಂದೆ ಸೋಮವಾರ ಹಾಜರಾದ ಸಿಡಿ ಯುವತಿ ನನ್ನನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದೇ ನರೇಶ್, ಶ್ರವಣ್ ಎಂದು ಹೇಳಿದ್ದಾಳೆ.
ತನಿಖಾಧಿಕಾರಿ ಕವಿತಾ ಮುಂದೆ ಸಿಡಿ ಯುವತಿ ಹೇಳಿದ್ದೇನು?
ರಮೇಶ್ ಜಾರಕಿಹೊಳಿ ವಿರುದ್ಧ ನನ್ನ ಹೇಳಿಕೆ ಪೂರ್ಣ ಸತ್ಯ ಅಲ್ಲ. ನಾನು ಹನಿಟ್ರ್ಯಾಪ್ ಆಗಿದ್ದೆ. ನರೇಶ್ ಹಾಗೂ ಶ್ರವಣ್ ನನ್ನನ್ನು ಆ ರೀತಿ ಬಳಸಿಕೊಂಡರು.
ನರೇಶ್ ಮತ್ತು ಶ್ರವಣ್ ಹೇಳಿದಂತೆ ನಾನು ನಡೆದುಕೊಂಡೆ. ಈ ಹಿಂದೆ ಒತ್ತಡದಲ್ಲಿದ್ದರಿಂದ ಆ ರೀತಿ ಹೇಳಿಕೆ ಕೊಟ್ಟಿದ್ದೆ ಎಂದು ತನಿಖಾಧಿಕಾರಿ ಕವಿತಾ ಮುಂದೆ ಯುವತಿ ನೀಡಿರುವ ಹೇಳಿಕೆಯನ್ನು ಕ್ಯಾಮೆರಾದಲ್ಲಿ ಎಸ್‌ಐಟಿ ರೆಕಾರ್ಡ್ ಮಾಡಿಕೊಂಡಿದೆ.
ಸಿಡಿ ಯುವತಿಯನ್ನು ಮತ್ತೊಮ್ಮೆ ಜಡ್ಜ್ ಮುಂದೆ ಹಾಜರುಪಡಿಸಲು ಎಸ್ ಐ ಟಿ ಸಿದ್ಧತೆ ಮಾಡಿಕೊಂಡಿದೆ. ಸದ್ಯಕ್ಕೆ ಸಿಆರ್‌ಪಿಸಿ 161 ಅಡಿಎಸ್ ಐಟಿ ಮುಂದೆ ಯುವತಿ ಈ ಹಿಂದೆ ಹೇಳಿಕೆ ನೀಡಿದ್ದಳು. ಇದೀಗ ಎಸ್‌ಐಟಿ ಮುಂದೆ ಬದಲಾದ ಹೇಳಿಕೆ ನೀಡಿರುವ ಸಂತ್ರಸ್ತ ಯುವತಿ ಸಿಆರ್‌ಪಿಸಿ 164 ಅಡಿಯಲ್ಲಿ ಜಡ್ಜ್ ಮುಂದೆಯೂ ಬದಲಾದ ಹೇಳಿಕೆ ನೀಡಲು ಸಿದ್ಧ ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ. ಎಸ್‌ಐಟಿ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಕೇಳಿದ್ದಾರೆ.
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ