ಮಂಡ್ಯ: ಮಾಜಿ ಶಾಸಕ ನಾರಾಯಣ ಗೌಡ (Naryana Gowda) ಜೆಡಿಎಸ್(JDS) ತೊರೆದು ಬಿಜೆಪಿ(BJP) ಸೇರಿ , ಇದೀಗ ಕಾಂಗ್ರೆಸ್ ಸೇರ್ಪಡೆ ಆಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನಲೆ ಅಸಮಾಧಾನಗೊಂಡಿರುವ ನಾರಾಯಣ ಗೌಡರು ಈಗ ಕಾಂಗ್ರೆಸ್ (Congress) ಸೇರ್ಪಡೆ ಆಗಲಿದ್ದಾರೆ ಎಂಬ ಮಾತು ಕೇಳಿ ಬರುತಿದೆ.
ಈ ಹಿಂದೆ ಮಂಡ್ಯ (Mandya) ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು, ಇಲ್ಲವಾದಲ್ಲಿ ನಾನು ಬೇರೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ನಾರಾಯಣಗೌಡರು ಬಹಿರಂಗವಾಗಿ ಹೇಳಿದ್ದರು.
ಮಂಡ್ಯ ಕ್ಷೇತ್ರವನ್ನು ಬಹುತೇಕ ಬಿಜೆಪಿ ಜೆಡಿಎಸ್‌ಗೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಬೇಸರಗೊಂಡ ನಾರಾಯಣಗೌಡರು , ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ .
ಸಿ ಎಂ ಭೇಟಿ ವೇಳೆ , ನನಗೆ ಮಂಡ್ಯ ಎಂಪಿ ಟಿಕೆಟ್ ನೀಡಿ ಎಂದು ನಾರಾಯಣಗೌಡ ಕೇಳಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಟಿಕೆಟ್ ನೀಡಲು ಸಾಧ್ಯವಿಲ್ಲ. ಮೊದಲು ಪಕ್ಷ ಸೇರ್ಪಡೆಯಾಗಬೇಕು ಎಂಬ ಭರವಸೆ ನೀಡಿದ್ದಾರೆ.ತೆರಿಗೆ ವಂಚನೆ : ಖಾಸಗಿ ಕಂಪನಿಗಳ ಮೇಲೆ IT ದಾಳಿ
ಪೂರಕವಾಗಿ ನಾರಾಯಣಗೌಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಚಿತ್ರವೊಂದು ವೈರಲ್ ಆಗಿದೆ.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ