February 22, 2026

Newsnap Kannada

The World at your finger tips!

nandiHills

ಭಾರಿ ಮಳೆಗೆ ನಂದಿಬೆಟ್ಟದ ಗುಡ್ಡ ಕುಸಿತ : ಗಿರಿಧಾಮದ ರಸ್ತೆ ಬಂದ್ ಪ್ರವಾಸಿಗರಿಗೆ ನಿರ್ಬಂಧ

Spread the love

ಚಿಕ್ಕಬಳ್ಳಾಪುರ ಹಾಗೂ ತಾಲೂಕಿನ ‌ವಿವಿದೆಡೆ ಕಳೆದ ರಾತ್ರಿ ಇಡೀ ಸುರಿದ ಭಾರೀ ಮಳೆಗೆ ನಂದಿಬೆಟ್ಟದ ಗುಡ್ಡಗಳು ಕುಸಿದಿರುವ ಘಟನೆ ಜರುಗಿದೆ.‌

ಬೆಟ್ಟದ ಮೇಲಿನ ಭಾಗದಿಂದ ಭಾರಿ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಬೆಟ್ಟದ ಕೆಳಗೆ ಇರುವ
ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿದು ಗಿರಿಧಾಮದ ರಸ್ತೆ ಬಂದ್ ಆಗಿದೆ.

ಈ ಕಾರಣಕ್ಕಾಗಿ ನಂದಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರನ್ನು ಪೊಲೀಸರು ಚೆಕ್ ಪೋಸ್ಟ್ ಬಳಿ ತಡೆದು ವಾಪಸ್ ಕಳಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೂಡ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.

error: Content is protected !!