ಬ್ರಾಹ್ಮಣರಿಗೆ ಅವಮಾನದ ದೃಶ್ಯಗಳ ಕತ್ತರಿಗೆ ಒಪ್ಪಿದ ಪೊಗರು ತಂಡ – ನಂದಕಿಶೋರ್ ಕ್ಷಮೆಯಾಚನೆ

Team Newsnap
1 Min Read

ಒಗ್ಗಟ್ಟಿನ ಹೋರಾಟದ ಫಲವಾಗಿ
ಬ್ರಾಹ್ಮಣರನ್ನು ಅವಮಾನಿಸುವ ವಿವಾದಿತ ದೃಶ್ಯಗಳನ್ನು ಕತ್ತರಿಸಲು ಪೊಗರು ಟೀಮ್ ನಿರ್ಧರಿಸಿದೆ ಮತ್ತು ಸಿನಿಮಾ ನಿರ್ದೇಶಕ ನಂದಕಿಶೋರ್‌ ಕ್ಷಮೆಯಾಚಿಸಿದ್ದಾರೆ.

ಬ್ರಾಹ್ಮಣ ಸಮುದಾಯದವರ ಪ್ರತಿಭಟನೆ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿ ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ಹಾಗೂ ನಿರ್ಮಾಪಕ ಬಿ.ಕೆ.ಗಂಗಾಧರ್ ಮಾತನಾಡಿದರು.

nanda kishor

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್. ಸಚ್ಚಿದಾನಂದ ಮೂರ್ತಿ ಅವರೊಂದಿಗೆ ಸಿನಿಮಾ ತಂಡದವರು ಅರವಿಂದ ಭವನದಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.

ಚಿತ್ರದಲ್ಲಿನ 12 ರಿಂದ 14 ದೃಶ್ಯಗಳನ್ನು ತೆಗೆಯಲು ಮಂಡಳಿ ಅಧ್ಯಕ್ಷರು ಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಚಪ್ಪಲಿ ಕಾಲಿನಿಂದ ಜನಿವಾರ ಹಾಕಿರುವ ಬ್ರಾಹ್ಮಣ ನ್ನು ಒದೆಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಆ ದೃಶ್ಯಗಳಿಗೆ ಕತ್ತರಿ ಹಾಕಲು ಪೊಗರು ಟೀಮ್ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ ಕ್ಷಮೆಯನ್ನು ಸಹ ಯಾಚಿಸಿದ್ದಾರೆ.

ಪೊಗರು ಚಿತ್ರತಂಡ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಬ್ರಾಹ್ಮಣರಿಗೆ ಅಪಮಾನದ ದೃಶ್ಯಗಳನ್ನು ತೆಗೆಯಲೇಬೇಕು ಎಂದು ಬ್ರಾಹ್ಮಣ ಸಮುದಾಯವರು ಆಗ್ರಹಿಸಿದ್ದರು. ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದ್ದರು. ಈ ವೇಳೆ ನಿರ್ದೇಶಕ ನಂದಕಿಶೋರ್ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಅವಮಾನ ಮಾಡಿದ ದೃಶ್ಯಗಳನ್ನು ನಾಳೆ ಒಳಗಡೆ ತೆಗೆಯಬೇಕು ಎಂದು ಗಡುವು ನೀಡಿದ್ದರು.

ಮೈಸೂರು, ಕಲಬುರಗಿ, ಧಾರವಾಡಗಳಲ್ಲಿ ಬ್ರಾಹ್ಮಣ ಸಮುದಾಯ‌ವರು ಪ್ರತಿಭಟನೆ , ಪತ್ರಿಕಾಗೋಷ್ಠಿ ಮಾಡಿ ಪೊಗರು ಚಿತ್ರದ ಅವಮಾನಿತ ದೃಶ್ಯಗಳನ್ನು ತೆಗೆಯುವಂತೆ ಒತ್ತಾಯಿಸಿದರು.

Share This Article
Leave a comment