ಈ ಬಗ್ಗೆ ಯದುವೀರ್ ಒಡೆಯರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಗುರುಹಿರಿಯರ ಸಲಹೆಯಂತೆ, ದಂಪತಿಗಳು ತಮ್ಮ ಮಗುವಿಗೆ “ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್” ಎಂಬ ಹೆಸರನ್ನು ಇಟ್ಟಿದ್ದಾರೆ. ಈ ನಾಮಕರಣ ಸಮಾರಂಭ ಅರಮನೆಯ ಕನ್ನಡಿ ತೊಟ್ಟಿಯಲ್ಲಿ, ರಾಜಮಾತೆ ಡಾ. ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಅರಮನೆ ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
“ಯುಗಾಧ್ಯಕ್ಷ” ಎಂಬ ಪದವು “ಯುಗದ ನಾಯಕ” ಅಥವಾ “ಯುಗದ ಅಧಿಪತಿ” ಎಂಬ ಅರ್ಥವನ್ನು ಹೊಂದಿದೆ. “ಅಧ್ಯಕ್ಷ” ಎಂದರೆ ನಾಯಕತ್ವ, ಸಮರ್ಥತೆ, ತಜ್ಞತೆ, ಕೌಶಲ್ಯ ಅಥವಾ ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. “ಕೃಷ್ಣ” ಎಂದರೆ ಸರ್ವ ಆಕರ್ಷಕನಾಗಿರುವ ಶ್ರೀಕೃಷ್ಣನಿಗೆ ಸಂಬಂಧಿಸಿದ ಅರ್ಥ ನೀಡುತ್ತದೆ. ಈ ಹೆಸರನ್ನು ಕುಟುಂಬ ಸಂಪ್ರದಾಯದ ಪ್ರಕಾರ ರಾಜಮಾತೆ ಡಾ. ಪ್ರಮೋದಾ ದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ನಾಮಕರಣ ಮಾಡಲಾಗಿದೆ.
ನಾಮಕರಣದ ಸಂದರ್ಭದಲ್ಲಿ ಮುದ್ದಾದ ಪುಟ್ಟ ರಾಜಕುಮಾರನ ನಗುವಿನ ಕ್ಷಣಗಳು ಸೆರೆ ಹಿಡಿಯಲಾದವು. ಯುಗಾಧ್ಯಕ್ಷ ತೊಟ್ಟಿಲಲ್ಲಿ ನಗುತ್ತಿರುವ, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮಗುವಿಗೆ ಆಶೀರ್ವಾದ ನೀಡುತ್ತಿರುವ ಮತ್ತು ಹಿರಿಯ ಪುತ್ರ ಆದ್ಯವೀರ್ ತನ್ನ ತಮ್ಮನ ಜೊತೆ ಆಟವಾಡುತ್ತಿರುವ ಹೃದಯಸ್ಪರ್ಶಿ ಚಿತ್ರಗಳನ್ನು ಯದುವೀರ್ ಒಡೆಯರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಇದನ್ನು ಓದಿ –ಬದುಕಿನ ಮುಖ್ಯಾಂಶಗಳು
ಕುಟುಂಬದ ಪೂರಕ ಮಾಹಿತಿ:
ಯದುವೀರ್ ಒಡೆಯರ್ 2016ರ ಜೂನ್ 27ರಂದು ರಾಜಸ್ಥಾನದ ದುಂಗರ್‌ಪುರ್ ಯುವರಾಣಿ ತ್ರಿಷಿಕಾ ಕುಮಾರಿ ದೇವಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ 2017ರ ಡಿಸೆಂಬರ್‌ನಲ್ಲಿ ಮೊದಲ ಪುತ್ರ ಆದ್ಯವೀರ್ ಜನ್ಮನಿತ್ತು. 2024ರ ಅಕ್ಟೋಬರ್ 11ರಂದು ಇವರ ಎರಡನೇ ಪುತ್ರನಾಗಿ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಜನ್ಮ ಪಡೆದನು. ಇತ್ತೀಚೆಗೆ, ಫೆಬ್ರವರಿ 19ರಂದು ಶ್ರದ್ಧಾಪೂರ್ವಕವಾಗಿ ನಾಮಕರಣ ಶಾಸ್ತ್ರ ನೆರವೇರಿಸಲಾಯಿತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು