ಮಂಡ್ಯ
ಬೆಂಗಳೂರು ಮಾತ್ರವಲ್ಲ ಜಿಲ್ಲೆಯ ನಾಗಮಂಗಲದಲ್ಲೂ ಡ್ರಗ್ಸ್ ಸಿಗುತ್ತೆ ಎಂದು
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಶಿವರಾಮೇಗೌಡ,
ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಇದರಿಂದ ಗ್ರಾಮಾಂತರ ಪ್ರದೇಶಕ್ಕೂ ಡ್ರಗ್ಸ್ ದಂಧೆ ವ್ಯಾಪಿಸುತ್ತಿದೆ.
ಹೊರ ದೇಶಗಳಿಂದ ಬಂದಿರುವ ಪ್ರಜೆಗಳು ನಿರ್ಭೀತವಾಗಿ ಡ್ರಗ್ಸ್ ಮಾರುತ್ತಿದ್ದಾರೆ.
ಬೆಂಗಳೂರಿನ ಕಲ್ಯಾಣ ನಗರದಲ್ಲಿ ನನ್ನದೂ ಸ್ಕೂಲ್ ಇದೆ.
ಆ ರಸ್ತೆಯಲ್ಲಿ ನೈಜೀರಿಯ, ಸೌತ್ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಮಾರಾಟ ಮಾಡುತ್ತಾ, ಸೇವನೆ ಮಾಡುತ್ತಾ ನಿಂತಿರುತ್ತಾರೆ
ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಈ ಮಟ್ಟಕ್ಕೆ ಆಗಿರೋದು ದುರ್ದೈವ.
ಡ್ರಗ್ಸ್ ದಂಧೆ ಮಟ್ಟ ಹಾಕಲು ಸರ್ಕಾರ ವಿಫಲವಾಗಿದೆ.
ಯಡಿಯೂರಪ್ಪ ಸರ್ಕಾರ ಮಾತ್ರವಲ್ಲ, 20 ವರ್ಷದಿಂದ ಡ್ರಗ್ಸ್ ದಂಧೆ ನಡೆದುಕೊಂಡು ಬರುತ್ತದೆ
ಈಗ ದೊಡ್ಡ ಪ್ರಮಾಣಕ್ಕೆ ಹೋಗಿದೆ ಎಂದು ಹೇಳಿದರು.
ಜೆಡಿಎಸ್ ಸರ್ಕಾರವಿದ್ದಾಗಲೂ ಡ್ರಗ್ಸ್ ದಂಧೆ ನಡೆಯುತ್ತಿತ್ತು.
ನಮ್ಮದೇ ಪಕ್ಷದ ಮುಖಂಡರು ಗಾಂಜಾ ಸೇರಿದಂತೆ ಬೇರೆ ಬೇರೆ ಚಟುವಟಿಕೆಯಿಂದ ಬಂದ ಹಣದಲ್ಲೇ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದರು.
ಡ್ರಗ್ಸ್ ದಂಧೆ ಕೋರರಿಗೆ ರಾಜಕಾರಣಿಗಳ ಬೆಂಬಲವೂ ಇದೆ.
ಗೋವಾ, ಶ್ರೀಲಂಕಾಕ್ಕೆ ಕರೆದೋಯ್ದು ಇಸ್ಪೀಟ್ ಆಡಿಸುವಂತ ದಂಧೆ ಹಾಗೂ
ತೋಟದ ಮನೆಯಲ್ಲಿ ರೇವಾ ಪಾರ್ಟಿ ಮಾಡುವಂತಹ ದಂಧೆ ನಡೆಯುತ್ತಿದೆ.
ಇಂತಹ ಘಟನೆಗಳು ಮರುಕಳಿಸದೇ ಇರಬೇಕಾದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರರು.
Super good informative news. Different than others. Keep growing good luck