December 26, 2024

Newsnap Kannada

The World at your finger tips!

police 1

ಮದ್ವೆ ಆಗುವಂತೆ ಒತ್ತಾಯಿಸಿ ಭಾವನಿಂದಲೇ ನಾದಿನಿ ಅಪಹರಣ – ಬಂಧನ

Spread the love

ಮದುವೆ ಆಗುವಂತೆ ಒತ್ತಾಯಿಸಿ ನಾದಿನಿಯನ್ನು ಭಾವನೇ ಅಪಹರಣ ಮಾಡಿರುವ ಘಟನೆ ಬೆಂಗಳೂರಿನ ಕೊಡುಗೆಹಳ್ಳಿಯಲ್ಲಿ ಜರುಗಿದೆ.ದೇವರಾಜ್ ಎಂಬಾತ ಪತ್ನಿಯ ಸಹೋದರಿಯನ್ನೇ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಹೇಳಲಾಗಿದೆ.

ಅಕ್ಕನನ್ನು ಮದುವೆಯಾಗಿದ್ದ ದೇವರಾಜ್​ ಬಳಿಕ ತಾನು ತಂಗಿಯನ್ನು ಪ್ರೀತಿಸುತ್ತಿದ್ದೀನಿ ಅಂತ ಆಕೆಯ ಹಿಂದೆ ಬಿದ್ದಿದ್ದನಂತೆ. ಆದರೆ ದೇವರಾಜ್ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳಂತೆ. ಈ ಹಿನ್ನೆಲೆಯಲ್ಲಿ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಬಲವಂತವಾಗಿ ಮದುವೆಯಾಗಲು ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಕೊಡಿಗೇಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಮಾಡಿದ್ದ ಪೊಲೀಸರು, ಯುವತಿಯನ್ನು ರಕ್ಷಣೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ದೇವರಾಜ್​ ಜೊತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಅಡಿ ಆತನ ಸಹಚರರಾದ ನವೀನ್, ಕುಮಾರ್ ರನ್ನು ಪೊಲೀಸರು ಬಂಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!