December 24, 2024

Newsnap Kannada

The World at your finger tips!

krishnamurthy

ಮೈಸೂರು ರಾಜರು ಯುದ್ಧ ಮಾಡಿಲ್ಲ : ಶೋಕಿ ಜೀವನ ನಡೆಸಿದ್ದಾರೆ : ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

Spread the love

ಮೈಸೂರು ರಾಜರು ಯುದ್ಧ ಮಾಡಿದವರಲ್ಲ, ಶೋಕಿಯಾಗಿ ಜೀವನ ನಡೆಸಿದರು ಎಂದು ರಾಜ್ಯ ಜಂಗಲ್‌ ಲಾಡ್ಜಸ್‌ ಹಾಗೂ ರೆಸಾರ್ಟ್ಸ್ ನಿಗಮದ ಅಧ್ಯಕ್ಷ ಎಂ.ಅಪ್ಪಣ್ಣ ಅಕ್ಷೇಪಾರ್ಹವಾಗಿ ಹೇಳಿದ್ದಾರೆ.

ಈಡೀ ವಿಶ‍್ವವೇ ಗಮನ ಸೆಳೆಯುವಾಗೆ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಮೈಸೂರು ಮಹಾರಾಜರ ಕುರಿತು ರಾಜ್ಯ ಅರಣ‍್ಯ ವಸತಿ ಹಾಗೂ ವಿಹಾರಧಾಮಗಳ ನಿಗಮದ ಅಧ್ಯಕ್ಷ ಎಂ. ಅಪ್ಪಣ್ಣ ನೀಡಿರುವ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

krishnamurthy1

ಚಾಮರಾಜನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ನಡೆದ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ನಾಯಕ ಸಮುದಾಯದ ಕುರಿತು ಮಾತನಾಡುವ ಭರದಲ್ಲಿ, ಮೈಸೂರು ರಾಜರು ಎಂದಿಗೂ ಯುದ್ಧ ಮಾಡಿದವರಲ್ಲ. ಶೋಕಿಯಾಗಿ ಸುಖವಾದ ಜೀವನ ನಡೆಸಿದರು. ಆದರೆ ಮದಕರಿ ನಾಯಕನ ವಂಶಸ್ಥರು ನಿಜಕ್ಕೂ ಸೇನೆಯಲ್ಲಿ ಯುದ್ಧ ಮಾಡುವ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದಾರೆ ಎಂದು ಹೇಳಿದರು.

ಇವರು ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆ, ಟೀಕೆಗಳು ಶುರುವಾಗಿವೆ. ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಅಪ್ಪಣ್ಣ ಹೇಳಿಕೆಯನ್ನು ಅನೇಕರು ಟೀಕಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!