January 28, 2026

Newsnap Kannada

The World at your finger tips!

25BGMYSUGAR

ಮೈಶುಗರ್ ಕಾರ್ಖಾನೆ ನೌಕರರಿಗೆ ಎರಡು ತಿಂಗಳಿಂದ ಸಂಬಳದ ತೊಂದರೆ: ಬೀದಿಗಿಳಿದ ಪ್ರತಿಭಟನೆ

Spread the love

ಮಂಡ್ಯ: ಸಕ್ಕರೆ ನಾಡಿನ ಐಕ್ಯತೆಯ ಸಂಕೇತವಾಗಿ ಗುರುತಿಸಲ್ಪಡುವ ಮೈಶುಗರ್ ಕಾರ್ಖಾನೆ ಕಳೆದ ಕೆಲವು ವರ್ಷಗಳಿಂದ ಸಮಸ್ಯೆಗಳ ಸಿಲುಕಿನಿಂದ ಹೊರಬರಲು ವಿಫಲವಾಗಿದೆ. ಇದೀಗ, ಕಳೆದ ಎರಡು ತಿಂಗಳಿಂದ ಸಂಬಳವಿಲ್ಲದೇ ಕಷ್ಟದಲ್ಲಿರುವ ಕಾರ್ಖಾನೆ ನೌಕರರು ನಿರಾಶೆಯಲ್ಲಿದ್ದಾರೆ ಮತ್ತು ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೈಶುಗರ್ ಕಾರ್ಖಾನೆಯಲ್ಲಿ 250ಕ್ಕೂ ಹೆಚ್ಚು ಗುತ್ತಿಗೆ ನೌಕರರು ಸೇರಿದಂತೆ ಬಿಹಾರ ಹಾಗೂ ಇತರ ರಾಜ್ಯಗಳ ಕಾರ್ಮಿಕರು ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ ಇವರಿಗೆ ವೇತನ ಪಾವತಿಸಲಾಗಿಲ್ಲ. ಈ ಕುರಿತು ಮಾಡಿದ ಹಲವಾರು ಮನವಿಗೂ ಪ್ರತಿಕ್ರಿಯೆ ಸಿಗದ ಕಾರಣ, ಕಾರ್ಮಿಕರು ಪ್ರತಿದಿನದ ಜೀವನೋಪಾಯಕ್ಕೂ ಪರದಾಡುವ ಸ್ಥಿತಿಗೆ ಬಂದು ರಸ್ತೆ ತಲುಪಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಕಾರ್ಖಾನೆಯ ಗುತ್ತಿಗೆ ಕಂಪನಿ ಆರ್.ಬಿ.ಟೆಕ್ ಏಜೆನ್ಸಿ ಕಾರ್ಖಾನೆಯಿಂದ ಹಣ ಬಿಡುಗಡೆಯಾಗಿಲ್ಲ ಎಂದು ಕಾರಣ ತಿಳಿಸಿದೆ. ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಸಂಬಳ ಪಾವತಿ ಸಂಬಂಧ ಸೂಚನೆ ನೀಡಿದರೂ, ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾವತಿ ಇನ್ನೂ ವಿಳಂಬವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.ಇದನ್ನು ಓದಿ –ಪುಷ್ಪ 2 ಪ್ರೀಮಿಯರ್ ಶೋನಲ್ಲಿ ಕಾಲ್ತುಳಿತ: ಮಹಿಳೆ ಸಾವು, ಮಗನ ಸ್ಥಿತಿ ಗಂಭೀರ

ಅಲ್ಲದೆ, ಮೈಶುಗರ್ ವ್ಯಾಪ್ತಿಯ ಕಬ್ಬು ಸಂಪೂರ್ಣ ಖಾಲಿಯಾಗುವ ಮೊದಲೇ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಂಡಿದ್ದು, ರೈತರ ಆಕ್ರೋಶಕ್ಕೂ ಕಾರಣವಾಗಿದೆ. ನೌಕರರ ಆರ್ಥಿಕ ಸಂಕಷ್ಟ ಮತ್ತು ಕಬ್ಬು ಅರೆಯುವ ಕಾರ್ಯ ಸ್ಥಗಿತ ಎರಡೂ ಮಿಲೆಯ ನಿರ್ವಹಣಾ ದೌರ್ಬಲ್ಯವನ್ನು ತೋರಿಸುತ್ತಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರದಿಂದ ನಿರೀಕ್ಷೆ ಹೆಚ್ಚುತ್ತಿದೆ.

error: Content is protected !!