February 22, 2026

Newsnap Kannada

The World at your finger tips!

trutiya

ಮೈಸೂರಿನ ತೃತೀಯ ಲಿಂಗಿ ಈಗ ಲಾಯರ್ : ರಾಜ್ಯದಲ್ಲಿ ಮೊದಲಿಗರೆಂಬ ಖ್ಯಾತಿ

Spread the love

ರಾಜ್ಯದಲ್ಲೇ ಮೊದಲ ತೃತೀಯ ಲಿಂಗಿಯೊಬ್ಬರು‌ ಎಲ್​ಎಲ್​ಬಿ ಮುಗಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮೈಸೂರಿನ ಜಯನಗರದ ನಿವಾಸಿ ಸಿ. ಶಶಿ ಎಂಬುವರು ಎಲ್​ಎಲ್​ಬಿ ಮುಗಿಸಿ ಲಾಯರ್ ಆದ ರಾಜ್ಯದ ಮೊದಲ ತೃತೀಯ ಲಿಂಗಿ.

ಶಶಿ ನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ 3 ವರ್ಷದ ಎಲ್​ಎಲ್​ಬಿ ಕೋರ್ಸ್ ಮುಗಿಸಿದ್ದಾರೆ. ಈ ಕೋರ್ಸ್ ಮುಗಿಸಲು ಸಹಾಯ ಮಾಡಿದ ಎಲ್ಲಾ ಉಪನ್ಯಾಸಕರಿಗೂ‌ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

10ನೇ ತರಗತಿ ಓದುವಾಗ ದೇಹದಲ್ಲಿ ಆದ ಬದಲಾವಣೆಯಿಂದ ತೃತೀಯ ಲಿಂಗಿಯಾದರು. ಆ ನಂತರ ಅವರು ತುಂಬಾ ನೋವು, ಅವಮಾನ, ನಿಂದನೆ, ಕಿರುಕುಳಗಳನ್ನು ಅನುಭವಿಸಿದ್ದಾರೆ.

ಸ್ನೇಹಿತರು ಮಾಡಿದ ಆರ್ಥಿಕ ಸಹಾಯದಿಂದ ಪದವಿ ಮುಗಿಸಿದ್ದಾರೆ. ನಾನು ಅನುಭವಿಸಿದ ಕಷ್ಟಗಳನ್ನು ತೃತೀಯ ಲಿಂಗಿಗಳು ಅನುಭವಿಸಬಾರದು, ಅವರ ಕಷ್ಟಗಳಿಗೆ ನಾನು ಧ್ವನಿಯಾಗಬೇಕು ಎಂಬ ಉದ್ದೇಶದಿಂದ ಮುಂದೆ ನಡೆಯುತ್ತೇನೆ. ನ್ಯಾಯಾಧೀಶೆಯಾಗಬೇಕೆಂಬುದು ನನ್ನ ಆಸೆ ಎಂದು ಹೇಳಿದ್ದಾರೆ.

error: Content is protected !!