ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ 100 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನ್ನಡದಲ್ಲೇ ಕನ್ನಡಿಗರಿಗೆ ಮೈಸೂರು ದಸರಾದ ಶುಭಾಶಯಗಳನ್ನು ತಿಳಿಸಿದರು.
ಶಿಕ್ಷಣವೇ ಬೆಳಕು
‘ಎಲ್ಲರಿಗೂ ನಾಡಹಬ್ಬ ದಸರಾದ ಶುಭಾಶಯಗಳು’ ಎಂದು ಕನ್ನಡದಲ್ಲಿ ಭಾಷಣವನ್ನು ಮೋದಿ ಪ್ರಾರಂಭ ಮಾಡಿದರು.
ಮೈಸೂರು ವಿಶ್ವವಿದ್ಯಾಲಯದ ನೂರನೇ ಘಟಿಕೋತ್ಸವವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಅವರು, ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಶಿಕ್ಷಣವೇ ಬೆಳಕು’ ಎಂಬ ಉಕ್ತಿಯನ್ನು ಕನ್ನಡದಲ್ಲೇ ಉಲ್ಲೇಖ ಮಾಡಿದ ಮೋದಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಬಗೆಗೆ ಮನವರಿಕೆ ಮಾಡಿದರು.
ಇದೇ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಿರಿಮೆಯ ಬಗ್ಗೆ ಮಾತನಾಡಿದ ಅವರು ‘ಇಂದಿಗೆ ಸರಿಯಾಗಿ 102 ವರ್ಷಗಳ ಹಿಂದೆ ಮೈಸೂರು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಠಿ ಮೆಚ್ಚುವಂತಹದ್ದು. ಈ ಸಂಸ್ಥೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಂತಹ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಹೊಸ ವಿಚಾರಗಳಿಗೆ ಕಾರಣೀಭೂತರಾಗಿದ್ದಾರೆ’ ಎಂದರು.
ಮೈಸೂರು ದಸರಾ ಕುರಿತು ಮಾತನಾಡಿದ ಅವರು ‘ನಾನು ಕೆಲವು ಛಾಯಾಚಿತ್ರಗಳನ್ನು ನೋಡುತ್ತಿದ್ದೆ. ಕೊರೋನಾ ಸಂಬಂಧದ ಕೆಲವು ನಿರ್ಬಂಧಗಳನ್ನು ಬಿಟ್ಟರೆ ಜನರಲ್ಲಿ ಅದೇ ಉತ್ಸಾಹವಿದೆ’ ಎಂದರು.
ಘಟಿಕೋತ್ಸವದಲ್ಲಿ 29,018 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 18,344 ವಿದ್ಯಾರ್ಥಿಗಳು 10,674 ವಿದ್ಯಾರ್ಥಿನಿಯರು ಸೇರಿದ್ದಾರೆ.
ಒಟ್ಟು 654 ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 390 ಪುರುಷರು ಮತ್ತು 264 ಮಹಿಳೆಯರು ಇದ್ದಾರೆ.
ಘಟಿಕೋತ್ಸವದಲ್ಲಿ 198 ಬಹುಮಾನ, 392 ಪದಕ ಪ್ರದಾನಿಸಲಾಯ್ತು. 20,393 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ 7,971 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡಲಾಯ್ತು.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ