ಸ್ಥಳೀಯ ಯುವಕನೊಬ್ಬ ವಿವಾದಿತ ಪೋಸ್ಟ್ ಹಂಚಿಕೊಂಡಿದ್ದನ್ನು ಆಧರಿಸಿ ಪೊಲೀಸರು ಆತನನ್ನು ಬಂಧಿಸಿ, ಡಿಸೆಂಬರ್ 9ರಂದು ಕಲ್ಯಾಣಗಿರಿಯ ಪಾಂಡುರಂಗ ಅಲಿಯಾಸ್ ಸತೀಶ್ ಎಂಬಾತನನ್ನು ಠಾಣೆಗೆ ಕರೆತರಿದ್ದರು. ಸಂಜೆ 8:30 ಗಂಟೆಗೆ ಈ ವಿಚಾರವನ್ನು ತಿಳಿದ ಮುಸ್ಲಿಂ ಯುವಕರ ಗುಂಪು ಠಾಣೆಯ ಬಳಿ ಜಮಾಯಿಸಿತು. ಆರೋಪಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸುತ್ತಾ ಕೂಗಾಟ ಆರಂಭಿಸಿದರು.
ರಾತ್ರಿ 9:15 ಗಂಟೆಗೆ ಆಕ್ರೋಶಿತ ಗುಂಪು 1,000 ಕ್ಕೂ ಹೆಚ್ಚು ಜನ ಸೇರಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ, ಪೊಲೀಸರ ಮಾತನ್ನು ಕೇಳದೆ, ಠಾಣೆಯ ಮೇಲೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿತು. ಈ ಘಟನೆಯಿಂದ ಠಾಣೆಯ ಗಾಜು, ಕಿಟಕಿ ಪುಡಿ ಪುಡಿ ಆಯಿತು. ಪ್ರತಿಭಟನಾಕಾರರು ಪೊಲೀಸರ ಮೇಲೂ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಕಲ್ಲು ತೂರಾಟದಲ್ಲಿ ಡಿಸಿಪಿ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಗಾಯಗೊಂಡಿದ್ದಾರೆ. ಗಲಭೆ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆ ಕರೆಸಿ, ಗುಂಪನ್ನು ಚದುರಿಸಲಾಯಿತು. ಪೊಲೀಸರ ಮೇಲೆ ಹಲ್ಲೆ, ಸರ್ಕಾರಿ ಆಸ್ತಿಗೆ ಹಾನಿ ಮತ್ತು ಅಕ್ರಮ ಗುಂಪು ಕಟ್ಟಿ ಗಲಭೆ ಸೃಷ್ಟಿಸಿದ ಆರೋಪದ ಮೇಲೆ ಉದಯಗಿರಿ ಠಾಣೆಯ ಪಿಎಸ್‌ಐ ಸುನೀಲ್ ದೂರು ದಾಖಲಿಸಿದ್ದಾರೆ.ಇದನ್ನು ಓದಿ –1500 ವರ್ಷ ಪುರಾತನ ದೇವಾಲಯ ವಸಂತವಲ್ಲಭರಾಯ ಸ್ವಾಮಿ
ಈ ಸಂಬಂಧ 1,000 ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು