January 7, 2025

Newsnap Kannada

The World at your finger tips!

train ,railway,india

ಜ. 20 ರಿಂದ ಮೈಸೂರು – ಶಿವಮೊಗ್ಗ- ತಾಳಗುಪ್ಪ ಇಂಟರ್‌ ಸಿಟಿ ರೈಲು ಸಂಚಾರ ಆರಂಭ

Spread the love

ಮೈಸೂರು – ಬೆಂಗಳೂರು- ತಾಳಗುಪ್ಪ ರಾತ್ರಿ ರೈಲು ಸಂಚಾರವನ್ನು ಮಾಚ್೯ 31 ರ ವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ಮೈಸೂರು- ಶಿವಮೊಗ್ಗ- ತಾಳಗುಪ್ಪ ನಡುವೆ ಸಂಚಾರ ಮಾಡುತ್ತಿದ್ದ ಇಂಟರ್ ಸಿಟಿ ರೈಲು ಸಂಚಾರ ಜನವರಿ 20 ರಿಂದ ಆರಂಭಿಸಲಿದೆ.

ಜ 20 ರಿಂದ 31ರವರೆಗೆ ಮೈಸೂರು ತಾಳಗುಪ್ಪ ಇಂಟರ್ ಸಿಟಿ ರೈಲು ತಾತ್ಕಾಲಿಕ ವಾಗಿ ಸಂಚಾರ ಮಾಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟನೆ ತಿಳಿಸಿದೆ.

06295 ಸಂಖ್ಯೆಯ ಇಂಟರ್ ಸಿಟಿ ರೈಲು ಜನವರಿ 20 ರಂದು ಬೆಳಿಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಡಲಿದೆ. ಬೆ 10. 45ಕ್ಕೆ ಶಿವಮೊಗ್ಗ ಹಾಗೂ ಮಧ್ಯಾಹ್ನ 1.15 ಕ್ಕೆ ತಾಳಗುಪ್ಪ ತಲುಪಲಿದೆ.

ಅದೇ ರೀತಿ 06296 ರೈಲು ಗಾಡಿ ಮಧ್ಯಾಹ್ನ 3 ಗಂಟೆಗೆ ತಾಳಗುಪ್ಪದಿಂದ ಹೊರಟು 4. 15ಕ್ಕೆ ಶಿವಮೊಗ್ಗ ಹಾಗೂ ರಾತ್ರಿ 10. 15 ಕ್ಕೆ ಮೈಸೂರು ತಲುಪಲಿದೆ.

ಈಗಾಗಲೇ ರಾತ್ರಿ ರೈಲು ಸಂಚಾರ ಆರಂಭಿಸಿರುವ ತಾಳಗುಪ್ಪ- ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಟ್ರೈನ್ ಅನ್ನು ಜನವರಿ 31 ರವರೆಗೆ ವಿಸ್ತಾರಣೆ ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!