December 23, 2024

Newsnap Kannada

The World at your finger tips!

car,fire,suicide

Mysore: Retired employee burnt alive after setting fire to his car ಮೈಸೂರು : ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ನಿವೃತ್ತ ನೌಕರ ಸಜೀವ ದಹನ #Thenewsnap #latestnews #Employee #Suicide #Death #Accident #Mysuru_News #Mandya #Bengaluru #NEWS #Kodagu #madikeri #kushalnagar

ಮೈಸೂರು : ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ನಿವೃತ್ತ ನೌಕರ ಸಜೀವ ದಹನ

Spread the love

ಸರ್ಕಾರಿ ನಿವೃತ್ತ ನೌಕರರೊಬ್ಬರು ಕಾರಿನಲ್ಲೇ ಸಜೀವ ದಹನಗೊಂಡ ಘಟನೆ ಮೈಸೂರಿನ ಬಾಪೂಜಿ ನಗರದಲ್ಲಿಶುಕ್ರವಾರ ಸಂಭವಿಸಿದೆ.

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಶಿವಣ್ಣ(60) ಮೃತ ದುರ್ದೈವಿ.ಇದನ್ನು ಓದಿ –ಪಿಎಸ್‌ಐ ನೇಮಕಾತಿ ಅಕ್ರಮ: ADGP ಅಮೃತ್ ಪೌಲ್ ಗೆ 14 ದಿನ ನ್ಯಾಯಾಂಗ ಬಂಧನ

ನಿವೃತ್ತಿಯಾದ ಬಳಿಕ ಮನೆಯಲ್ಲಿ ಶಿವಣ್ಣ ಒಬ್ಬರೇ ಇದ್ದರು ಇಂದು ಊರಿನಿಂದ ತನ್ನ ಆಲ್ಟೋ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಬಂದಿದ್ದರು.ಬಾಪೂಜಿನಗದ ಹರಿವಿದ್ಯಾಲಯ ಹಿಂಭಾಗ ಹಾಡಹಗಲೇ ಕಾರು ಹೊತ್ತಿ ಉರಿದಿದ್ದು, ಕಾರಿನೊಳಗೇ ಶಿವಣ್ಣ ಸುಟ್ಟು ಕರಕಲಾಗಿದ್ದಾರೆ.

ಅನಾರೋಗ್ಯ ಹಿನ್ನೆಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಕಿಡ್ನಿ, ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಶಿವಣ್ಣ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ತನಿಖೆ ಬಳಿಕ ಸತ್ಯಾಸತ್ಯತೆ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

ಸರಸ್ವತಿ ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!