November 15, 2024

Newsnap Kannada

The World at your finger tips!

railway 2

ದೀಪಾಲಂಕಾರಗಳಿಂದ ಕಂಗೊಳಿಸಲಿದೆ ಮೈಸೂರು ರೈಲ್ವೆ ಮ್ಯೂಸಿಯಂ

Spread the love

ದಸರಾ ಹಿನ್ನೆಲೆಯಲ್ಲಿ ಅಕ್ಟೋಬರ್7 ರಿಂದ 15 ರ ತನಕ ದೀಪಾಲಂಕಾರಗಳೊಂದಿಗೆ ಮೈಸೂರು ರೈಲ್ವೆ ವಸ್ತುಸಂಗ್ರಹಾಲಯದ ಕೆಲಸದ ಸಮಯವನ್ನು ರಾತ್ರಿ 8 ರ ವರೆಗೆ ವಿಸ್ತರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

railway1


ರೈಲ್ವೆ ವಸ್ತುಸಂಗ್ರಹಾಲಯದ ಎಲ್ಲ ವಿಂಟೇಜ್ ಸ್ಟೀಮ್ ಲೋಕೋಮೋಟಿವ್‌ಗಳು, ಕೋಚ್‌ಗಳು, ತಪಾಸಣಾ ಗಾಡಿಗಳು, ಸರಕು ವ್ಯಾಗನ್‌ಗಳು, ಕ್ರೇನ್,ಆಟಿಕೆ ರೈಲು ಮತ್ತು ಇತರ ಎಲ್ಲ ಹೊರಾಂಗಣ ಪ್ರದರ್ಶನದ ವಸ್ತುಗಳನ್ನು ಪ್ರವಾಸಿಗರಿಗೆ ಅದ್ಭುತ ಅನುಭವ ನೀಡಲು ದೀಪಗಳಿಂದ ಅಲಂಕೃತಗೊಳಿಸಲಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅ. 12 (ಮಂಗಳವಾರ) ರಂದು ವಾರದ ರಜೆ ಇರುವುದಿಲ್ಲ.


ಪ್ರವಾಸಿಗರು ಯಾವುದೇ ಕೈಚೀಲಗಳು, ಬ್ಯಾಕ್‌ಪ್ಯಾಕ್‌ಗಳನ್ನು ವಸ್ತುಸಂಗ್ರಹಾಲಯದ ಆವರಣಕ್ಕೆ ಕೊಂಡೊಯ್ಯಲು ಅವಕಾಶವಿಲ್ಲ. ಹೊರಗಿನಿಂದ ತಂದ ಆಹಾರ, ಪಾನೀಯಗಳ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ವಾಗತ ಕೌಂಟರ್‌ನಲ್ಲಿ ನಿಗದಿತ ಶುಲ್ಕ ಪಾವತಿಸಿದ ನಂತರ ಎಸ್‌ಎಲ್‌ಆರ್, ಡಿಎಸ್‌ಎಲ್‌ಆರ್‌ನೊಂದಿಗೆ ಸ್ಥಿರ ಛಾಯಾಗ್ರಹಣಕ್ಕೆ ಅವಕಾಶ ನೀಡಲಾಗುವುದು.


ಸಂದರ್ಶಕರು ಕೋವಿಡ್ ಸಂಬಂಧಿತ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮನವಿ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!