December 25, 2024

Newsnap Kannada

The World at your finger tips!

dk mys

ಮೈಸೂರು ಮೇಯರ್ ಚುನಾವಣೆ ರೋಚಕ‌ ತಿರುವು: ಬಿಜೆಪಿಗೆ ಕೈ ಕೊಟ್ಟ ಜೆಡಿಎಸ್‌ ಮತ್ತೆ ಕೈ ಜೊತೆ ಮೈತ್ರಿ

Spread the love

ತೀವ್ರ ಕುತೂಹಲ ಮೂಡಿಸಿರುವ ಮೈಸೂರು ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಯಿಂದಾಗಿ ಬಿಜೆಪಿಯ ಎಲ್ಲಾ ಪ್ರಯತ್ನ ಗಳೂ ನಿರಾಸೆ ತಂದಿವೆ.

ಚುನಾವಣೆಗೆ ಕ್ಷಣಗಣನೆ ಆರಂಭ ವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಖುದ್ದು ಮೈಸೂರಿನಲ್ಲೇ ಠಿಕಾಣಿ ಹೂಡಿದ್ದಾರೆ. ಕೊನೆ‌ ಕ್ಷಣದಲ್ಲಿ ಮತ್ತೊಮ್ಮೆ ಅಖಾಡಕ್ಕಿಳಿದ ಡಿ.ಕೆ.ಶಿವಕುಮಾರ್ ಜೆಡಿಎಸ್‌ ಜೊತೆಗಿನ ಮೈತ್ರಿ ಮುಂದುವರೆಸುವಲ್ಲಿ ತಡರಾತ್ರಿ ಯಶಸ್ವಿಯಾಗಿದ್ದಾರೆ.

ಮೇಯರ್ ಹುದ್ದೆ ಜೆಡಿಎಸ್ ಗೆ :

ಮೇಯರ್‌ ಹುದ್ದೆಯನ್ನು ಬಿಟ್ಟುಕೊಡುವಂತೆ ಕುಮಾರಸ್ವಾಮಿ ಬೇಡಿಕೆಗೆ ಡಿ.ಕೆ. ಶಿವಕುಮಾರ್ ಸಮ್ಮತಿಸಿದ್ದಾರೆ.

ಇತ್ತ ಜೆಡಿಎಸ್​​​ ಜೊತೆ ಸಖ್ಯ ಬೆಳೆಸಲು ಮುಂದಾಗಿದ್ದ ಬಿಜೆಪಿಗೆ ಈ ಬೆಳವಣಿಗೆ ನಿರಾಸೆಯನ್ನುಂಟು ಮಾಡಿದೆ.

ಈ‌ ನಡುವೆ ನಮ್ಮನ್ನು ಎರಡೂ ರಾಜಕೀಯ ಪಕ್ಷಗಳು ಹೀನಾಯವಾಗಿ ಕಂಡಿವೆ‌,‌ ನಾವು ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದೇವೆ ಎಂದು ಹೇಳುವ ಮೂಲಕ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡ‌ ಹೆಚ್.ಡಿ.ಕುಮಾರಸ್ವಾಮಿ ಭೇಟಿಗೆ ಕಾಂಗ್ರೆಸ್ ಬಿಜೆಪಿ ನಾಯಕರು‌ ಮುಗಿಬಿದ್ದಿದ್ದಾರೆ.‌

ಬಿಜೆಪಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ನೇತೃತ್ವದ ನಿಯೋಗ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಗೌಪ್ಯ ಮಾತುಕತೆ ಮಾಡಿದ್ದರು.

ಕಾಂಗ್ರೆಸ್‌ನಿಂದ ಶಾಸಕ ತನ್ವೀರ್‌ಸೇಠ್ ಭೇಟಿ ನೀಡಿ‌ ಮಾತುಕತೆ ಮಾಡಿದ್ದರು. ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡು ಮೈತ್ರಿಗೆ ಗುಡ್‌ಬೈ ಹೇಳಲು ಜೆಡಿಎಸ್ ಮುಂದಾಗಿತ್ತು.

ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಬಿಜೆಪಿ, ಮೇಯರ್ ಹುದ್ದೆಗೆ ಏರಲು ಜೆಡಿಎಸ್‌ ಬೆಂಬಲ ಪಡೆಯಲು ಜೆಡಿಎಸ್ ನಾಯಕರು ದುಂಬಾಲು ಬಿದ್ದಿದ್ದರು.‌

ಚುನಾವಣೆ ಎಷ್ಟು ಗಂಟೆಗೆ ?

ಇಂದು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಚುನಾವಣೆ ಆರಂಭವಾಗಲಿದೆ. ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ಜರುಗಲಿದೆ.

ಮೀಸಲಾತಿ ನಿಗದಿ

ಮೇಯರ್‌ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗ ಮೀಸಲು ಪ್ರಕಟವಾಗಿದೆ. ಎರಡು ಸ್ಥಾನಗಳಿಗೆ ಚುನಾವಣೆ ನಡೆಯುವ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೂ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Copyright © All rights reserved Newsnap | Newsever by AF themes.
error: Content is protected !!