March 16, 2025

Newsnap Kannada

The World at your finger tips!

maharani college

ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ: ಕಾರ್ಮಿಕ ಅವಶೇಷಗಳಡಿ ಸಿಲುಕಿದ ದುರಂತ

Spread the love

ಮೈಸೂರು: ಶಿಥಿಲಾವಸ್ಥೆಯಲ್ಲಿದ್ದ ಮೈಸೂರಿನ 80 ವರ್ಷಗಳ ಹಳೆಯ ಮಹಾರಾಣಿ ಕಾಲೇಜಿನ ಕಟ್ಟಡ ಇಂದು ಕುಸಿದಿದ್ದು, ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಒಬ್ಬ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದಾರೆ.

ಕಳೆದ ತಿಂಗಳು ಈ ಹಳೆಯ ಕಟ್ಟಡದ ದುರಸ್ತಿ ಕಾರ್ಯ ಪ್ರಾರಂಭಗೊಂಡಿತ್ತು. ಇಂದು ಸಂಜೆ ಕಟ್ಟಡದ ಮೇಲ್ಛಾವಣಿ ಹಠಾತ್ ಕುಸಿದ ಪರಿಣಾಮ, ಕಾರ್ಮಿಕ ಗೌಸಿಯನಗರದ ಸದ್ದಾಂ ಎಂಬವರು ಅವಶೇಷಗಳಡಿ ಸಿಲುಕಿದರು.

ಅವರು ಕಿಟಕಿಗಳನ್ನು ತೆಗೆದುಹಾಕುವ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಸಕ್ರಿಯವಾಗಿಯೇ ನಡೆದಿದೆ.ಇದನ್ನು ಓದಿ –ಮೈನಿಂಗ್ ಉದ್ಯಮಿಗಳ ಮನೆ ಹಾಗೂ ಕಚೇರಿ ಮೇಲೆ IT ದಾಳಿ

ಸ್ಥಳೀಯ ಜನತೆಗೂ ಈ ಘಟನೆ ಆಘಾತವನ್ನುಂಟುಮಾಡಿದ್ದು, ರಕ್ಷಣಾ ಕಾರ್ಯಾಚರಣೆ ಶೀಘ್ರ ಪೂರ್ಣಗೊಳ್ಳಬೇಕೆಂದು ಆಕಾಂಕ್ಷೆ ವ್ಯಕ್ತವಾಗಿದೆ.

Copyright © All rights reserved Newsnap | Newsever by AF themes.
error: Content is protected !!