ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಮತ್ತೊಂದು ವಕ್ಫ್ ಸಂಬಂಧಿಸಿದ ವಿವಾದ ತಲೆದೋರಿದೆ, ಮೈಸೂರು ಜಿಲ್ಲೆಯ ಶಾಲಾ ಜಾಗವನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ.
ಮೈಸೂರು ತಾಲೂಕಿನ ಇಲವಾಲದ ಸರ್ಕಾರಿ ಶಾಲಾ ಜಾಗವನ್ನು ವಕ್ಫ್ ಮಂಡಳಿ ತನ್ನ ಆಸ್ತಿ ಎಂದು ಹಕ್ಕು ಹೇಳಿಕೊಂಡಿದೆ. 2020ರಲ್ಲಿ ಈ ಜಾಗವನ್ನು ವಕ್ಫ್ ಮಂಡಳಿ ತನ್ನದಾಗಿಸಿಕೊಂಡು, ಸರ್ಕಾರಿ ಖರಾಬು ಹೆಸರನ್ನು ತೆಗೆದು ಆರ್‌ಟಿಸಿ ರಜಿಸ್ಟರ್‌ನಲ್ಲಿ ವಕ್ಫ್ ಆಸ್ತಿ ಎಂದು ಬದಲಾವಣೆ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದ ತೀರ್ಮಾನ ಮೈಸೂರು ಉಪವಿಭಾಗಾಧಿಕಾರಿಗಳ ಕೋರ್ಟ್ನಲ್ಲಿ ತೆಗೆದುಕೊಳ್ಳಲಾಗಿದೆ.ಇದನ್ನು ಓದಿ –ʻಉಪಚುನಾವಣೆಯ ನಂತರ ಗೃಹ ಲಕ್ಷ್ಮಿ ಯೋಜನೆ ನಿಲ್ಲಿಸುತ್ತಾರೆʼ: ಎಚ್.ಡಿ.ಡಿ ಆರೋಪ
ಈ ವಿಚಾರವನ್ನು ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ಹಂಚಿಕೊಂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿ, ‘ಅಭಿನಂದನೆಗಳು ಸರ್’ ಎಂದು ಟಾಂಗ್ ನೀಡಿದ್ದಾರೆ.
More Stories
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ