ವಿಶ್ವವಿಖ್ಯಾತ ಮೈಸೂರು ದಸರಾ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಲೇ ಪ್ರಪಂಚವ್ಯಾಪಿಯಾಗಿ ಪ್ರಸಿದ್ಧವಾಗಿದೆ. ಅಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೈಸೂರಿನ ಪೋಲೀಸರ ಸಂಗೀತ ತಂಡಗಳೂ ಸಹ ಇದಕ್ಕೆ ಪ್ರತೀ ವರ್ಷ ಸಾಕ್ಷಿಯಾಗುತ್ತವೆ.
ಗುರುವಾರ ನಡೆದ ಸಂಗೀತ ಸಂಜೆಯೂ ಸಹ ಇಂತಹದಕ್ಕೆ ಸಾಕ್ಷಿಯಾಯಿತು. ಮೈಸೂರಿನ ಪೋಲೀಸ್ ವಾದ್ಯವೃಂದದವರು ತಹರೇವಾರಿ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕರ್ನಾಟಕ ಪೋಲೀಸ್ ವಾದ್ಯ ವೃಂದದವರು ‘ಮಹಿಷಾಸುರ ಮರ್ದಿನಿ ಗೀತೆ’ ಶ್ರೀ ಕೃಷ್ಣ ದೇವರಾಯ ಚಲನಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಗೀತೆಯನ್ನು, ಪೋಲೀಸ್ ಆಂಗ್ಲ ವಾದ್ಯವೃಂದದವರು, ಮೈಸೂರಿನ ಪೋಲೀಸ್ ಅಧಿಕಾರಿ ಕ್ರಿಸ್ಟೋಫರ್ ಫ್ರಾನ್ಸಿಸ್ ಸಂಯೋಜನೆಯ ಪಾಶ್ಚಿಮಾತ್ಯ ಗೀತೆಯಾದ ‘ಸೆರೆನೆಟ್’ ‘ಬಿತೋವೆನ್ಸ್’ ಹೀಗೆ ಅನೇಕ ಗೀತೆಗಳನ್ನು ಸಂಗೀತ ವಾದ್ಯಗಳ ಮೂಲಕ ನುಡಿಸಿ ಸಂಗೀತದ ರಸದೌತಣ ನೀಡಿದರು.
ಪೋಲೀಸರೆಂದರೆ ಕೇವಲ ಶಿಸ್ತು, ನಿಯಮಗಳನ್ನು ಅನುಸರಿಸುವವರು ಮಾತ್ರವಲ್ಲ. ಅವರೂ ಸಹ ಕಲೆಯನ್ನು ಆರಾಧಿಸುವವರು ಎಂಬುದಕ್ಕೆ ಮತ್ತೆ ಮೈಸೂರು ದಸರಾ ಸಾಕ್ಷಿಯಾಯಿತು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು