ಮೈಸೂರು ಡಿಸಿ ವರ್ಗಾವಣೆ ವಿವಾದ: ಸಿಎಟಿ ಕಾಯ್ದಿರಿಸಿದ ತೀರ್ಪು

Team Newsnap
1 Min Read

ಕೇವಲ 29 ದಿನಗಳಲ್ಲಿ ಯಾವುದೇ ಕಾರಣ ನೀಡದೆ ತಮ್ಮನ್ನು ವರ್ಗಾವಣೆ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ, ಐಎಎಸ್ ಅಧಿಕಾರಿ ಬಿ. ಶರತ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇಂದು ಪೂರ್ಣಗೊಳಿಸಿದ ಸಿಇಟಿ ತೀರ್ಪು ಕಾಯ್ದಿರಿಸಿದೆ.

ಸಿಇಟಿ ಎದುರು ಇಂದು ಮತ್ತೆ ವಾದ ಮಂಡಿಸಿರುವ ರಾಜ್ಯ ಸರ್ಕಾರ, ಅಧಿಕಾರಿ ಬಿ. ಶರತ್ ವರ್ಗಾವಣೆಯಾದ ಸೆಪ್ಟೆಂಬರ್ 29 ರಿಂದ ಈವರೆಗೆ ಕರ್ತವ್ಯಕ್ಕೆ ಹಾಜರಾಗಿಲ್ಲ. ರೇಷ್ಮೆ ಮಾರಾಟ ನಿಗಮದ ವ್ಯವಸ್ಥಾಪಕ ಹುದ್ದೆಯನ್ನು ಸ್ವೀಕರಿಸಿಲ್ಲ. ಬಿಹಾರ ಚುನಾವಣಾ ಕರ್ತವ್ಯಕ್ಕೆ ತೆರಳಿಲ್ಲ. ವರ್ಗಾವಣೆಯಾದ ಬಳಿಕ ಅನಾರೋಗ್ಯ ಕಾರಣ ನೀಡಿ ಸುದೀರ್ಘ ರಜೆ ಹಾಕಿದ್ದಾರೆ. ಮೈಸೂರು ಡಿಸಿ ಆಗಲು ಆರೋಗ್ಯಯುತ ಅಧಿಕಾರಿ ಅಗತ್ಯವಿದೆ. ಆದ್ದರಿಂದ ಅವರ ಅರ್ಜಿ ವಜಾಗೊಳಿಸಬೇಕೆಂದು ಸರ್ಕಾರ ಮನವಿ ಮಾಡಿದೆ.

ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡುವ ಉದ್ದೇಶದಿಂದಲೇ ಸರ್ಕಾರ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿ ಆದೇಶಿಸಿತ್ತು.

ಆಗಸ್ಟ್ 29 ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ವಹಿಸಿಕೊಂಡಿದ್ದ ಶರತ್ ಅವರನ್ನು ತಿಂಗಳು ತುಂಬುವ ಮುನ್ನವೇ ಸೆಪ್ಟೆಂಬರ್ 27 ರಂದು ವರ್ಗಾವಣೆ ಮಾಡಿತ್ತು.

ಸರ್ಕಾರದ ಈ ಧೋರಣೆ ಖಂಡಿಸಿ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹಾಗೆಯೇ ಸರ್ಕಾರದ ಕ್ರಮ ನಿಯಮ ಬಾಹಿರ ಎಂದು ಆಕ್ಷೇಪಿಸಿ ಡಿಸಿ ಶರತ್ ಅಕ್ಟೋಬರ್ ಮೊದಲ ವಾರದಲ್ಲಿ ಸಿಇಟಿಗೆ ದೂರು ಸಲ್ಲಿಸಿದ್ದರು.

ಸಿಎಟಿ ನ್ಯಾಯಾಲಯವು ವಾದ ವಿವಾದಗಳನ್ನು ಸಮಗ್ರ ವಾಗಿ ಆಲಿಸಿದೆ. ಅಂತಿಮ ತೀರ್ಪು ನೀಡುವುದನ್ನು ಕಾಯ್ದಿರಿಸಿದೆ.

Share This Article
Leave a comment